ಟೆಂಪೋ ಢಿಕ್ಕಿ: ಅಪರಿಚಿತ ಮೃತ್ಯು
Update: 2022-04-15 20:33 IST
ಮಂಗಳೂರು : ನಗರದ ಕೊಡೆಕ್ಕಲ್ ವೈದ್ಯನಾಥ ಬಸ್ ನಿಲ್ದಾಣದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಎ.12ರಂದು ರಾತ್ರಿ 7.30ಕ್ಕೆ ಸುಮಾರು 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ನಡೆದುಕೊಂಡು ಹೋಗುತ್ತಿದ್ದಾಗ 407ಟೆಂಪೊ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಈ ವ್ಯಕ್ತಿಯು 5.6 ಅಡಿ ಎತ್ತರವಿದ್ದು, ಎದೆಯ ಮಧ್ಯಭಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಇದೆ. ಕಪ್ಪು ಬಿಳಿ ಮಿಶ್ರಿತ ತಲೆಕೂದಲು, ಗಡ್ಡ ಮತ್ತು ಮೀಸೆ ಇದೆ. ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಸಂಬಂಧಿಕರಿದ್ದರೆ ಪಾಂಡೇಶ್ವರ ಪೊಲೀಸ್ ಠಾಣೆ (೦೮೨೪-೨೨೨೦೮೫೦)ಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.