×
Ad

ಎವೆರೆಸ್ಟ್ ಪರ್ವತಾರೋಹಿ ಮರಣ: ಕುಳಿತುಕೊಂಡಿದ್ದ ಭಂಗಿಯಲ್ಲಿ ಮೃತದೇಹ ಪತ್ತೆ

Update: 2022-04-15 23:50 IST

ಕಠ್ಮಂಡು, ಎ.15: ಹಲವು ಬಾರಿ ಎವರೆಸ್ಟ್ ಪರ್ವತ ಏರಿದ್ದ ನೇಪಾಳದ ಪರ್ವತಾರೋಹಿ ಗುರುವಾರ ಪರ್ವತದ ಶಿಖರ ಏರುವ ಹಂತದಲ್ಲಿ ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಸಂಘಟಕರು ಹೇಳಿದ್ದಾರೆ. ಈ ವರ್ಷದ ಪರ್ವತಾರೋಹಣ ಅವಧಿಯಲ್ಲಿ ಸಂಭವಿಸಿದ ಪ್ರಥಮ ಸಾವಿನ ಪ್ರಕರಣ ಇದಾಗಿದೆ.

38 ವರ್ಷದ ನಿಗಿಮಿ ತೆಂಜಿ ಶೆರ್ಪಾ ಅವರ ಮೃತದೇಹ ಎವರೆಸ್ಟ್ ಶಿಖರಾಗ್ರದ ತುಸು ಕೆಳಗಿನ ‘ಫುಟ್ಬಾಲ್ ಅಂಗಣ’  ಎಂದು ಕರೆಸಿಕೊಳ್ಳುವ ಪ್ರದೇಶದಲ್ಲಿ ಕಂಡು ಬಂದಿದೆ. ಯಾವುದೇ ಅಪಘಾತ ಸಂಭವಿಸಿಲ್ಲ. ಅತೀ ಎತ್ತರದ ಪ್ರದೇಶಕ್ಕೆ ಸಂಬಂಧಿಸಿದ ಅಸ್ವಸ್ಥತೆ ಅವರ ಸಾವಿಗೆ ಕಾರಣ ಎಂದು ಅಮೆರಿಕ ಮೂಲದ ಪರ್ವತಾರೋಹಣ ಸಂಸ್ಥೆಯ ಸ್ಥಳೀಯ ಅಧಿಕಾರಿ ಪಸಂಗ್ ಶೆರ್ಪ ಹೇಳಿದ್ದಾರೆ. ಕ್ಯಾಂಪ್ 2ಕ್ಕೆ ಸಲಕರಣೆಗಳನ್ನು ಶೆರ್ಪಾ ಸಾಗಿಸುತ್ತಿದ್ದರು. ಕುಳಿತುಕೊಂಡ ಭಂಗಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು ಬೆನ್ನಿನಲ್ಲಿ ಸಲಕರಣೆ ತುಂಬಿದ್ದ ಬ್ಯಾಗ್ ಇತ್ತು. ಈ ಘಟನೆಯಿಂದ ಪರ್ವತಾರೋಹಣ ತಂಡಕ್ಕೆ ಭಾರೀ ಆಘಾತವಾಗಿದೆ ಎಂದು ಸಂಸ್ಥೆಯ ವೆಬ್ಸೈಟ್ನಲ್ಲಿ ಶೋಕ ಸಂದೇಶ ಪೋಸ್ಟ್ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News