ಪಾಲಕ್ಕಾಡ್: ಆರೆಸ್ಸೆಸ್ ಮುಖಂಡನ ಹತ್ಯೆ
Update: 2022-04-16 14:16 IST
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ನ ಮೇಲಮುರಿಯಲ್ಲಿ ಆರೆಸ್ಸೆಸ್ ಮುಖಂಡರೋರ್ವರನ್ನು ಹತ್ಯೆಗೈದ ಘಟನೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ ಎಂದು mathrubhumi.com ವರದಿ ಮಾಡಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಶ್ರೀನಿವಾಸನ್ ಎಂದು ಗುರುತಿಸಲಾಗಿದೆ.
3 ಬೈಕ್ ನಲ್ಲಿ ಬಂದ 5 ಮಂದಿ ಅಪರಿಚಿತರ ತಂಡ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸನ್ ಅವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಿದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು mathrubhumi.com ವರದಿ ಮಾಡಿದೆ.
ಶುಕ್ರವಾರ ಪಾಲಕ್ಕಾಡ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ(ಎಸ್ ಡಿಪಿಐ) ಮುಖಂಡ ಝುಬೈರ್ ಎಂಬವರ ಹತ್ಯೆ ನಡೆದಿತ್ತು.