ಜಮೀಯ್ಯತುಲ್ ಫಲಾಹ್ ವತಿಯಿಂದ ರಮಝಾನ್ ಕಿಟ್ ವಿತರಣೆ
Update: 2022-04-17 07:16 IST
ಮಂಗಳೂರು : ಪ್ರತೀ ವರ್ಷದಂತೆ ಈ ಬಾರಿಯೂ ಪವಿತ್ರ ರಮಝಾನ್ ತಿಂಗಳ ಪ್ರಾರಂಭದಲ್ಲಿ ಜಮೀಯ್ಯತುಲ್ ಫಲಾಹ್ ದ.ಕ. ಹಾಗೂ ಉಡುಪಿ ಜಿಲ್ಲಾ ಸಮಿತಿಯು ತಮ್ಮ 13 ತಾಲೂಕು ಘಟಕಗಳಲ್ಲಿ ಉಪವಾಸ ತಿಂಗಳ ಅಕ್ಕಿ ಹಾಗೂ ದವಸ ಧಾನ್ಯಗಳನ್ನೊಳಗೊಂಡ ಸುಮಾರು 1,800 ಕ್ಕೂ ಹೆಚ್ಚು ಕಿಟ್ ಗಳನ್ನು ವಿತರಿಸಲಾಯಿತು.
ಕಿಟ್ ವಿತರಣಾ ಕಾರ್ಯಕ್ರಮವನ್ನು ಹಾಗೂ ಅದರ ಉಸ್ತುವಾರಿಯನ್ನು ಸಂಸ್ಥೆಯ ಅಧ್ಯಕ್ಷರಾದ ಶಬೀಹ್ ಅಹ್ಮದ್ ಖಾಝಿ, ಕಾರ್ಯದರ್ಶಿ ಅಡ್ವೋಕೇಟ್ ಫಝುಲ್ ರಹೀಮ್, ಕೋಶಾಧಿಕಾರಿ ಬಶೀರ್ ಎಫ್.ಎಂ. ಹಾಗೂ ಎನ್ಆರ್ ಸಿ ಸಿ ಪ್ರತಿನಿಧಿ ಪರ್ವೀಝ್ ಆಲಿ ಅವರು ನಡೆಸಿದರು.