ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣ: ಘಟನೆ ಹಿಂದೆ ಬಿಜೆಪಿ ಕೈವಾಡವಿದೆ ಎಂದ ಎಎಪಿ

Update: 2022-04-18 03:58 GMT

ಹೊಸದಿಲ್ಲಿ: ದಿಲ್ಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಸಂದರ್ಭ ನಡೆದ ಘರ್ಷಣೆ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.

ಅಕ್ರಮ ವಲಸಿಗರು ತಂಗಲು ಎಎಪಿ ಸರಕಾರ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವಾಗಿ ಹಿಂಸಾಚಾರ ನಡೆದಿದೆ ಮತ್ತು ಘಟನೆಗೆ ಸಂಬಂಧಿಸಿ ಎಎಪಿ ಕಾರ್ಯಕರ್ತನೋರ್ವನನ್ನು ಬಂಧಿಸಲಾಗಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆರೋಪಿಸಿದ್ದರು.

"ಇತ್ತೀಚೆಗೆ ದಿಲ್ಲಿ ಸಿಎಂ ನಿವಾಸದ ಹೊರಗೆ ಗೂಂಡಾಗಿರಿಗಾಗಿ ಬಂಧಿಸಲಾದ 8 ಗೂಂಡಾಗಳನ್ನು ದಿಲ್ಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ  ಸನ್ಮಾನಿಸಿದ್ದರು. ಇತ್ತೀಚಿನ ಘಟನೆಗಳನ್ನು ನೋಡಿದರೆ ಹಿಂಸಾಚಾರದ ಹಿಂದೆ ಬಿಜೆಪಿಯೇ ಇದೆ ಎಂಬುದು ಸ್ಪಷ್ಟವಾಗಿದೆ" ಎಂದು ಎಎಪಿ ಆರೋಪಿಸಿದೆ.

ಎಎಪಿ ಕೂಡ ಗ್ರೇಟರ್ ಕೈಲಾಶ್‌ ಪ್ರದೇಶದಲ್ಲಿ ಕೂಡ ಹನುಮ ಜಯಂತಿಯನ್ನು ಆಚರಿಸಿತ್ತು. ಇದು ಹೃದಯಸ್ಪರ್ಶಿ ಅಂತರಧರ್ಮದ ಬಾಂಧವ್ಯ ಮತ್ತು ಗೌರವಕ್ಕೆ ಸಾಕ್ಷಿಯಾಯಿತು. ಯಾಕೆ ಎಎಪಿಯ ಕಾರ್ಯಕ್ರಮಗಳಲ್ಲಿ ಅಂತಹ ಹಿಂಸಾಚಾರ ಘಟನೆಗಳು ನಡೆಯುವುದಿಲ್ಲ ಮತ್ತು ಬಿಜೆಪಿ ಆಯೋಜಿಸಿದಾಗ ಮಾತ್ರ ಏಕೆ ನಡೆಯುತ್ತವೆ? ಎಂದು ಎಎಪಿ ಪ್ರಶ್ನಿಸಿದೆ.

ಶನಿವಾರ ಹನುಮ ಜಯಂತಿ ಜಯಂತಿಯ ಮೆರವಣಿಗೆಯ ಸಮಯದಲ್ಲಿ ಘರ್ಷಣೆ ಆರಂಭವಾಗಿತ್ತು. ಈ ವೇಳೆ ಉದ್ರಿಕ್ತರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕಲ್ಲುತೂರಾಟದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. 

ಘಟನೆಗೆ ಸಂಬಂಧಿಸಿ ಈವರೆಗೆ 21 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News