ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ

Update: 2022-04-18 04:46 GMT

ಹೊಸದಿಲ್ಲಿ: ದೇಶದಲ್ಲಿ ಇಂದು  ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ  ಭಾರೀ  ಜಿಗಿತವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಭಯ ಹುಟ್ಟಿಸಿದೆ ಎಂದು NDTV ವರದಿ ಮಾಡಿದೆ.

ಕಳೆದ 24 ಗಂಟೆಗಳಲ್ಲಿ 2,183 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.  ನಿನ್ನೆಯ ಪ್ರಕರಣಗಳ ಸಂಖ್ಯೆ (1,150) ಕ್ಕಿಂತ 89.8 ರಷ್ಟು ಏರಿಕೆಯಾಗಿದೆ.

ದೈನಂದಿನ ಸಾವಿನ ಸಂಖ್ಯೆಯು ತೀವ್ರವಾಗಿ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 214 ಕ್ಕೆ ತಲುಪಿದೆ., ನಿನ್ನೆಯ ಬುಲೆಟಿನ್‌ನಲ್ಲಿ ಕೇವಲ ನಾಲ್ಕು ಸಾವುಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿರುವ ನಗರಗಳಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿ ಕೂಡ ಒಂದಾಗಿದ್ದು, ಇಲ್ಲಿ  517 ಕೋವಿಡ್ ಪ್ರಕರಣಗಳನ್ನು ವರದಿಯಾಗಿದೆ.

ನಿನ್ನೆಯ ಬುಲೆಟಿನ್ ಪ್ರಕಾರ ದಿಲ್ಲಿಯಲ್ಲಿ ಒಟ್ಟು ಕೋವಿಡ್-ಸೋಂಕಿತ ರೋಗಿಗಳ ಸಂಖ್ಯೆ 1,518 ತಲುಪಿದ್ದು, ಇದು  ಈ ವರ್ಷದ ಮಾರ್ಚ್ 3 ರಿಂದ ಅತಿ ಹೆಚ್ಚು ಪ್ರಕರಣವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News