ಹಾಂಕಾಂಗ್: ಏರ್‌ ಇಂಡಿಯಾ ವಿಮಾನಗಳಿಗೆ ಎ.24ರವರೆಗೆ ನಿಷೇಧ

Update: 2022-04-18 18:02 GMT

ಹಾಂಕಾಂಗ್, ಎ.18: ಏರಿಂಡಿಯಾ ವಿಮಾನದಲ್ಲಿದ್ದ 3 ಪ್ರಯಾಣಿಕರಲ್ಲಿ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎಪ್ರಿಲ್ 24ರವರೆಗೆ ಏರ್ ಇಂಡಿಯಾ ವಿಮಾನಗಳ ಸೇವೆಯನ್ನು ನಿಷೇಧಿಸಲಾಗಿದೆ ಎಂದು ಹಾಂಕಾಂಗ್ ಘೋಷಿಸಿದೆ.

 ಎಪ್ರಿಲ್ 16ರಂದು ಏರಿಂಡಿಯಾದ ಡಿಲ್ಲಿ-ಕೋಲ್ಕತಾ-ಹಾಂಕಾಂಗ್ ವಿಮಾನದಲ್ಲಿದ್ದ 3 ಪ್ರಯಾಣಿಕರಲ್ಲಿ ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ . ಆದ್ದರಿಂದ ಹಾಂಕಾಂಗ್ಗೆ ಪ್ರಯಾಣಿಸುವ ಏರಿಂಡಿಯಾ ವಿಮಾನಗಳನ್ನು ಎಪ್ರಿಲ್ 24ರವರೆಗೆ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದಿಂದ ಆಗಮಿಸುವ ಪ್ರಯಾಣಿಕರು ಪ್ರಯಾಣಕ್ಕೆ 48 ಗಂಟೆಗಳ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿದ್ದರೆ ಮಾತ್ರ ಅವರಿಗೆ ಹಾಂಕಾಂಗ್ ಪ್ರವೇಶಿಸಲು ಅವಕಾಶವಿದೆ. ಅಲ್ಲದೆ, ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರೂ ಹಾಂಕಾಂಗ್ ವಿಮಾನ ನಿಲ್ದಾಣದ ಆವರಣದಲ್ಲಿ ಕೋವಿಡ್ ಸೋಂಕು ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News