ಇರಾನ್ ವಿರುದ್ಧದ ಕಿಂಚಿತ್ ನಡೆಗೂ ಭಾರೀ ಬೆಲೆ ತೆರಬೇಕಾಗುತ್ತದೆ: ಇಸ್ರೇಲ್ ಗೆ ಇಬ್ರಾಹಿಂ ರೈಸಿ ಎಚ್ಚರಿಕೆ

Update: 2022-04-18 18:05 GMT
Photo: PTI

ಟೆಹ್ರಾನ್, ಎ.18: ಇರಾನ್ ವಿರುದ್ಧದ ಕಿಂಚಿತ್ ನಡೆಗೂ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೋಮವಾರ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಸೇನಾ ದಿನಾಚರಣೆ ಸಂದರ್ಭ ಮಾತನಾಡಿದ ಅವರು ‘ ಯೆಹೂದಿ ಆಡಳಿತ(ಇಸ್ರೇಲ್) ಒಂದು ವಿಷಯವನ್ನು ಮರೆಯಬಾರದು. ನಮ್ಮ ದೇಶದ ವಿರುದ್ಧ ನೀವು ನಡೆಸುವ ಕಿಂಚಿತ್ ನಡೆಗೂ ನಮ್ಮ ಪಡೆ ನಿಮ್ಮ ಕೇಂದ್ರಸ್ಥಾನವನ್ನು ಗುರಿಯಾಗಿಸಿ ತಿರುಗೇಟು ನೀಡುತ್ತದೆ’  ಎಂದರು. ನಮ್ಮದು ರಕ್ಷಣಾತ್ಮಕ ಕಾರ್ಯತಂತ್ರ, ದಾಳಿ ನಡೆಸುವ ಕಾರ್ಯತಂತ್ರವಲ್ಲ. ನಮ್ಮ ವಿರುದ್ಧ ಜಾರಿಗೊಳಿಸಿದ್ದ ನಿರ್ಬಂಧಗಳನ್ನು ಇರಾನ್ ಸೇನೆ ಅತ್ಯುತ್ತಮವಾಗಿ ಬಳಸಿಕೊಂಡು ತನ್ನನ್ನು ಸಶಕ್ತಗೊಳಿಸಿದೆ ಮತ್ತು ನಮ್ಮ ಮಿಲಿಟರಿ ಕೈಗಾರಿಕೆಗಳು ಈಗ ಅತ್ಯುತ್ತಮ ಸ್ಥಿತಿಯಲ್ಲಿವೆ ಎಂದವರು ಹೇಳಿದರು.

ತನ್ನ ಹಲವು ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿ ಇಸ್ರೇಲ್ ವಾಯುದಾಳಿ ನಡೆಸಿ ಧ್ವಂಸಗೊಳಿಸಿದೆ ಎಂದು ಇರಾನ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News