8 ವರ್ಷ ಅಧಿಕಾರದಲ್ಲಿದ್ದ ಹೊರತಾಗಿ ಆರ್ಥಿಕ ಪ್ರಗತಿ ಗುರಿ ತಲುಪಲು ಮೋದಿ ವಿಫಲ: ಸುಬ್ರಮಣಿಯನ್ ಸ್ವಾಮಿ

Update: 2022-04-19 11:00 GMT
ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ: ತಮ್ಮದೇ ಪಕ್ಷದ ಸರಕಾರವನ್ನು ಟೀಕಿಸಲು ಹಿಂದೇಟು ಹಾಕದ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿ ಮಾಡಿದ್ದಾರಲ್ಲದೆ ಅವರು ಆರ್ಥಿಕ ಪ್ರಗತಿಯ ಗುರಿಗಳನ್ನು ತಲುಪಲು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

"ಅಧಿಕಾರದಲ್ಲಿ ಎಂಟು ವರ್ಷವಿದ್ದ ಹೊರತಾಗಿಯೂ ಮೋದಿ ಅವರು ಆರ್ಥಿಕ ಪ್ರಗತಿಯ ಗುರಿಗಳನ್ನು ತಲುಪಲು ವಿಫಲರಾಗಿದ್ದಾರೆಂಬುದನ್ನು ನಾವು ಕಾಣಬಹುದು. ಇನ್ನೊಂದೆಡೆ 2016ರಿಂದ ಪ್ರಗತಿ ಪರಿಣಾಮವೂ ವಾರ್ಷಿಕ ಇಳಿಮುಖವಾಗುತ್ತಿದೆ. ರಾಷ್ಟ್ರೀಯ ಭದ್ರತೆಯೂ ಬಹಳಷ್ಟು ದುರ್ಬಲಗೊಂಡಿದೆ. ಚೀನಾ ಕುರಿತು ಮೋದಿಗೆ ನಿಜವಾಗಿಯೂ ಏನೂ ತಿಳಿದಿಲ್ಲ. ಸುಧಾರಿಸಲು ಅವಕಾಶವಿದೆ, ಆದರೆ ಹೇಗೆಂದು ಅವರಿಗೆ ತಿಳಿದಿದೆಯೇ?,'' ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.

ಸಮಸ್ಯೆಗಳ ಪರಿಹಾರಕ್ಕೆ ಯಾವ ಸಲಹೆ ನೀಡುತ್ತೀರಿ ಎಂದು ಟ್ವಿಟ್ಟರಿಗರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮಿ, "ಜ್ಞಾನವನ್ನು ಸ್ವೀಕರಿಸುವ ಶ್ರದ್ಧೆಯುಳ್ಳವರಿಗೆ ಅದನ್ನು ಹಂಚಬೇಕೆಂದು ನಮ್ಮ ಪ್ರಾಚೀನ ಋಷಿಗಳು ಹೇಳಿದ್ದಾರೆ,'' ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿಗೆ ಪರ್ಯಾಯವಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದನ್ನು ಒಪ್ಪದ ಸ್ವಾಮಿ "ಬ್ರಿಟಿಷ್ ಸಾಮ್ರಾಜ್ಯಶಾಹಿಯೊಬ್ಬರು ಅದನ್ನೇ ಹೇಳಿದ್ದರು, ಬ್ರಿಟಿಷರು ಭಾರತ ಬಿಟ್ಟು ತೆರಳಿದರೆ ಭಾರತವು ಹೋಳಾಗಲಿದೆ ಎಂದಿದ್ದರು,'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News