×
Ad

ಉಕ್ರೇನ್ ಯುದ್ಧವನ್ನು ದೀರ್ಘಕಾಲದವರೆಗೆ ಎಳೆಯಲು ಪಾಶ್ಚಾತ್ಯ ರಾಷ್ಟ್ರಗಳ ಯತ್ನ: ರಶ್ಯ ಆರೋಪ

Update: 2022-04-19 23:30 IST

ಮಾಸೊ, ಎ.19: ಉಕ್ರೇನ್ ಮೇಲಿನ ರಶ್ಯದ ಆಕ್ರಮಣ 9ನೇ ವಾರಕ್ಕೆ ಕಾಲಿಟ್ಟಿರುವಂತೆಯೇ, ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಯುದ್ಧವನ್ನು ದೀರ್ಘಕಾಲದವರೆಗೆ ಎಳೆದೊಯ್ಯಲು ಯತ್ನಿಸುತ್ತಿದೆ ಎಂದು ರಶ್ಯವು ಆರೋಪಿಸಿದೆ.

‘‘ಪೂರ್ವ ಉಕ್ರೇನ್‌ನ ಪ್ರಾಂತಗಳಾದ ‘ಡೊನೆಟ್‌ಸ್ಕ್ ’ಹಾಗೂ ‘ಲುಗಾನ್‌ಸ್ಕ್ ಜನತಾ ಗಣರಾಜ್ಯ’ವನ್ನು ವಿಮೋಚನೆಗೊಳಿಸುವ ನಮ್ಮ ಕಾರ್ಯತಂತ್ರವನ್ನು ನಾವು ಹಂತಹಂತವಾಗಿ ಜಾರಿಗೊಳಿಸುತ್ತಿದ್ದೇವೆ ’’ ಎಂದು ರಶ್ಯದ ರಕ್ಷಣಾ ಸಚಿವ ಸೆರ್ಗೆಯಿ ಶೊಯಿಗು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಮೂಲಕ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಈ ಅಭಿಯಾನವನ್ನು ದೀರ್ಘಾವಧಿಗೆ ಎಳೆಯುತ್ತಿದೆ ಎಂದರು.

ಈ ಮಧ್ಯೆ ಕ್ರೆಮಿನಾ ನಗರದಲ್ಲಿ ಬೀದಿ ಕಾಳಗ ಆರಂಭಗೊಂಡಿದ್ದು, ಅಲ್ಲಿಂದ ನಾಗರಿಕರ ಪಲಾಯನ ಕಷ್ಟಕರವಾಗಿದೆಯೆಂದು ಉಕ್ರೇನ್ ಸೇನಾ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News