×
Ad

ಕಟ್ಟಡಗಳನ್ನು ಕೆಡಹುವ ವೇಳೆ ಬುಲ್ಡೋಜರ್‌ ಸವಾರಿ ಮಾಡಿದ ಆಜ್‌ತಕ್‌ ನಿರೂಪಕಿ ಅಂಜನಾ ಓಂ ಕಶ್ಯಪ್‌

Update: 2022-04-20 16:24 IST
Photo: Indianexpress.com/mohan

ಹೊಸದಿಲ್ಲಿ: ಬುಧವಾರ ದಿಲ್ಲಿಯ ಜಹಾಂಗೀರ್‌ ಪುರದಲ್ಲಿ ಮುನ್ಸಿಪಲ್‌ ಕಾರ್ಪೊರೇಷನ್‌ ʼಅಕ್ರಮ ಕಟ್ಟಡಗಳ ಧ್ವಂಸʼ ಕಾರ್ಯ ನಡೆಸುತ್ತಿದ್ದ ವೇಳೆ ಬುಲ್ಡೋಜರ್‌ ಮೇಲೆ ಹತ್ತಿ ವರದಿ ಮಾಡಿದ ಆಜ್‌ತಕ್‌ ವಾಹಿನಿಯ ನಿರೂಪಕಿ ಅಂಜನಾ ಓಂ ಕಶ್ಯಪ್‌ ವಿರುದ್ಧ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. "ಅಕ್ರಮ ಕಟ್ಟಡಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳನ್ನು ನೀವು ಕೈವ್‌ ಆಗಿ ನೋಡುತ್ತಿದ್ದೀರಿ" ಎಂದು ವರದಿ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಳಿಕ ಅವರು ಅಲ್ಲಿನ ನಿವಾಸಿಗಳನ್ನು ಮಾತನಾಡಿಸುವ ವೇಳೆ ಓರ್ವ ಯುವಕ "ನಾನೋರ್ವ ಹಿಂದೂ. ನನ್ನ ಹೆಸರು ಸೋನು. ನಾವು ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಂದಾಗಿ ವಾಸಿಸುತ್ತಿದ್ದೇವೆ. ಇಲ್ಲಿ ಜನರ ಬದುಕನ್ನು ನಿರ್ನಾಮ ಮಾಡಲಾಗುತ್ತಿದೆ" ಎನ್ನುವಾಗಲೇ, ಪೊಲೀಸರು ನನ್ನನ್ನು ಇಲ್ಲಿಂದ ತೆರಳುವಂತೆ ಹೇಳಿದ್ದಾರೆ ಎಂದು ನೆಪ ಹೇಳಿ ಅವರು ಅರ್ಧದಲ್ಲೇ ಮಾತು ಮುಗಿಸಿ ಬರುವ ದೃಶ್ಯವೂ ವೀಡಿಯೋದಲ್ಲಿ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News