×
Ad

ಕೆಸಿಎಫ್ ಬಹರೈನ್ ಗ್ರಾಂಡ್ ಇಫ್ತಾರ್ ಸಂಗಮಕ್ಕೆ ಎಪಿ ಉಸ್ತಾದ್‌ ಅತಿಥಿ

Update: 2022-04-21 08:39 IST

ಮನಾಮ : ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ 22-04- 2022 ರಂದು ಪಾಕಿಸ್ತಾನ್ ಕ್ಲಬ್ ಮೈದಾನದಲ್ಲಿ ಆಯೋಜಿಸುವ ಬೃಹತ್ ಇಫ್ತಾರ್ ಸಂಗಮಕ್ಕೆ ಭಾರತದ ಪರಮೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಸಂಜೆ 4-30 ಕ್ಕೆ ಬದ್ರ್ ಮೌಲಿದ್ ಮಜ್ಲಿಸ್ ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ಸದಸ್ಯರಾದ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣೆಯನ್ನು ಮಾಡಲಿದ್ದಾರೆ.
ಫೆಲೆಸ್ತೀನ್ ರಾಯಭಾರಿ ಸಹಿತ ವಿವಿಧ ಸಂಘಟನಾ ನಾಯಕರು ಭಾಗವಹಿಸಲಿದ್ದಾರೆ ಎಂದು ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News