ಎರಡು ದಿನಗಳ ಭಾರತ ಭೇಟಿಗೆ ಅಹಮದಾಬಾದ್ ಗೆ ಬಂದಿಳಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
Update: 2022-04-21 10:17 IST
ಹೊಸದಿಲ್ಲಿ: ಎರಡು ದಿನಗಳ ಭಾರತ ಪ್ರವಾಸದ ಭಾಗವಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಬೆಳಗ್ಗೆ ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ವಿಮಾನ ನಿಲ್ದಾಣದಲ್ಲಿ ಹೂ ಗುಚ್ಛ ನೀಡಿ ಸ್ವಾಗತಿಸಿದರು.
ಜಾನ್ಸನ್ ಅವರು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಅಲ್ಲಿ ಇಬ್ಬರೂ ವ್ಯಾಪಾರ ಹಾಗೂ ರಕ್ಷಣೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ಜಾನ್ಸನ್ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅವರು ಉದ್ಯಮಿ ಗೌತಮ್ ಅದಾನಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ನಂತರ ಬ್ರಿಟನ್ ಪ್ರಧಾನಿ ವಡೋದರಾಕ್ಕೆ ತೆರಳಲಿದ್ದು, ಅಲ್ಲಿ ಹೆವಿ ಮೆಷಿನ್ ಸಂಸ್ಥೆಯ ಜೆಸಿಬಿಯ ಸ್ಥಾವರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಗಾಂಧಿನಗರದ ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿ ಅಥವಾ ಗಿಫ್ಟ್ ಸಿಟಿಗೆ ತೆರಳಲಿದ್ದಾರೆ. ಸಂಜೆ ದಿಲ್ಲಿಗೆ ತೆರಳಲಿದ್ದಾರೆ.