×
Ad

ಮಹಾತ್ಮ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

Update: 2022-04-21 12:40 IST

ಅಹಮದಾಬಾದ್: ಭಾರತಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಗುಜರಾತ್‌ನ ಸಬರಮತಿಯಲ್ಲಿರುವ ಮಹಾತ್ಮ ಗಾಂಧಿ ಅವರ ಆಶ್ರಮಕ್ಕೆ ತೆರಳಿದರು. ಜಾನ್ಸನ್ ಅವರು ಆಶ್ರಮದಲ್ಲಿರುವ  ಸಾಂಪ್ರದಾಯಿಕ ಚರಕವನ್ನು ತಿರುಗಿಸಲು  ಪ್ರಯತ್ನಿಸಿದ್ದು ಕಂಡುಬಂತು.

‘ಈ ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬರಲು ಹಾಗೂ  ಜಗತ್ತನ್ನು ಉತ್ತಮಗೊಳಿಸಲು ಅವರು ಹೇಗೆ ಸತ್ಯ ಹಾಗೂ  ಅಹಿಂಸೆಯ ಸರಳ ತತ್ವಗಳನ್ನು ಸಜ್ಜುಗೊಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಪಾರ ಸೌಭಾಗ್ಯ’ ಎಂದು ಜಾನ್ಸನ್ ಅವರು ಸಂದರ್ಶಕರ ಪುಸ್ತಕದಲ್ಲಿ ಸಂದೇಶವನ್ನು ಬರೆದಿದ್ದಾರೆ.

ಜಾನ್ಸನ್ ಗುರುವಾರ ಬೆಳಿಗ್ಗೆ ತಮ್ಮ ಭಾರತ ಭೇಟಿಯನ್ನು ಆರಂಭಿಸಲು ಅಹಮದಾಬಾದ್‌ಗೆ ಆಗಮಿಸಿದರು ಹಾಗೂ ಅವರು  ವಿಮಾನ ನಿಲ್ದಾಣದಿಂದ ನಗರದ ಹೋಟೆಲ್‌ಗೆ ನಾಲ್ಕು ಕಿ.ಮೀ. ಮಾರ್ಗದಲ್ಲಿ ಭವ್ಯವಾದ ಸ್ವಾಗತವನ್ನು ಪಡೆದರು.

ಜಾನ್ಸನ್ ಅವರನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಅವರನ್ನು ಬರಮಾಡಿಕೊಳ್ಳಲು ರಾಜ್ಯದ ಹಿರಿಯ ಅಧಿಕಾರಿಗಳು ಮತ್ತು ಸಚಿವರು ಕೂಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News