×
Ad

"ಜಹಾಂಗೀರ್‌ಪುರಿ ನಿವಾಸಿಗಳು ಅಕ್ರಮ ವಲಸಿಗರು, ಡಾನ್‌ ಗಳಂತೆ ಬಟ್ಟೆ ಧರಿಸುತ್ತಾರೆ": ಬಿಜೆಪಿ ನಾಯಕ

Update: 2022-04-21 14:47 IST

ಹೊಸದಿಲ್ಲಿ: ಬಿಜೆಪಿಯ ದಿಲ್ಲಿ ಉಸ್ತುವಾರಿ ಹಾಗೂ ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರು ಇತ್ತೀಚೆಗೆ ಹನುಮಾನ್ ಜಯಂತಿ ಮೆರವಣಿಗೆ ವೇಳೆ ಹಿಂಸೆಗೆ ಸಾಕ್ಷಿಯಾದ ಜಹಾಂಗೀರ್‍ಪುರ್  ನಿವಾಸಿಗಳನ್ನು ಅಕ್ರಮ ವಲಸಿಗರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

"ಯುರೋಪ್‍ನ ಕೆಲ ಭಾಗಗಳಲ್ಲಿ ನೋಡಿದಂತೆ- ಸ್ವೀಡನ್-ಹಾಲೆಂಡ್, ಬೆಲ್ಜಿಯಂ ಇತ್ಯಾದಿ- ಅಲ್ಲಿ ವಲಸಿಗ ಸಮುದಾಯಗಳು ಪ್ರವೇಶ ನಿಷಿದ್ಧ ವಲಯಗಳನ್ನು ಸೃಷ್ಟಿಸಿವೆ, ಇಂತಹ ಸ್ಥಳಗಳಿಗೆ ಜನರು ಅಥವಾ ಪೊಲೀಸರು ಕೂಡ ತೆರಳಲು ಭಯ ಪಡುತ್ತಾರೆ,  ದಿಲ್ಲಿಯಲ್ಲೂ ಅಕ್ರಮ ವಲಸಿಗರು ಇದನ್ನೇ ಅನುಸರಿಸುತ್ತಿದ್ದಾರೆ. ಇದು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ, ಅವರಿಗೆ ರಾಮ ನವಮಿ ಮೆರವಣಿಗೆ ಮೇಲೆ ದಾಳಿ ಮಾಡುವ ಹಕ್ಕಿಲ್ಲ, ಅವರು ಅಕ್ರಮ ಬಂದೂಕುಗಳನ್ನು ಬಳಸುವುದನ್ನು ಹಾಗೂ ಅಕ್ರಮ ಕಟ್ಟಡಗಳಿಂದ ಕೆಲಸ ಮಾಡುವುದನ್ನು ನೋಡಿದ್ದೇವೆ. ಈ ಜನರ ಹಾವಭಾವವನ್ನು ನೋಡಬಹುದು ಅವರು ಡಾನ್‍ಗಳಂತೆ ಬಟ್ಟೆ ಧರಿಸುತ್ತಾರೆ, ಬಿಜೆಪಿ ಯಾವುದೇ ಸಮುದಾಯದ ವಿರುದ್ಧವಲ್ಲ, ನಾವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್‍ಗಾಗಿ ಶ್ರಮಿಸುತ್ತಿದ್ದೇವೆ, ಆದರೆ ಬಿಜೆಪಿ ಸರಕಾರಗಳು ಎಲ್ಲಾ ಕ್ರಿಮಿನಲ್ ಶಕ್ತಿಗಳು ಹಾಗೂ ಉಗ್ರರ ವಿರುದ್ಧ ಹೋರಾಡಲಿದೆ, ಇದು ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡುವುದಿಲ್ಲ, ಆದರೆ ಉಗ್ರ ಸಂಘಟನೆಗಳ ಜತೆ ನಂಟು ಹೊಂದಿರುವ ಜನರು, ಮಾಫಿಯಾ ಮತ್ತು ಕ್ರಿಮಿನಲ್‍ಗಳ ವಿರುದ್ಧ ಹೋರಾಡುತ್ತೇವೆ" ಎಂದು ಅವರು ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News