ಮುಂದಿನ ವಾರ ಉಕ್ರೇನ್‌ಗೆ ವಿಶ್ವಸಂಸ್ಥೆ ಮುಖ್ಯಸ್ಥರ ಭೇಟಿ

Update: 2022-04-23 20:51 GMT

ವಿಶ್ವಸಂಸ್ಥೆ, ಎ.23: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಮುಂದಿನ ವಾರ ಯುದ್ಧಗ್ರಸ್ಥ ಉಕ್ರೇನ್‌ಗೆ ಭೇಟಿ ನೀಡಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.

 ಗುಟೆರಸ್ ಮಂಗಳವಾರ ರಶ್ಯಕ್ಕೆ ಆಗಮಿಸಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಯುದ್ಧದಿಂದ ಉದ್ಭವಿಸಿರುವ ಸಮಸ್ಯೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. 2 ದಿನದ ಬಳಿಕ, ಗುರುವಾರ ಉಕ್ರೇನ್‌ಗೆ ಭೇಟಿ ನೀಡಿ ಅಧ್ಯಕ್ಷ ಝೆಲೆನ್‌ಸ್ಕಿ ಹಾಗೂ ವಿದೇಶ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಮುಖಾಮುಖಿ ಮಾತುಕತೆಗೆ ಸಮ್ಮತಿಸುವಂತೆ ಗುಟೆರಸ್ ಉಭಯ ಮುಖಂಡರಿಗೆ ಪತ್ರ ಬರೆದು ವಿನಂತಿಸಿದ್ದರು. ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದ ಪ್ರಕರಣದಲ್ಲಿ ಮೂಲೆಗುಂಪಾಗಿರುವ ವಿಶ್ವಸಂಸ್ಥೆಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಇದಾಗಿದೆ . ಉಭಯ ದೇಶಗಳ ನಡುವಿನ ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ವಿಶ್ವಸಂಸ್ಥೆ ಸಿದ್ಧ ಎಂದು ಇತ್ತೀಚೆಗೆ ಗುಟೆರಸ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News