ಮುಂಬೈನಲ್ಲಿ ಪ್ರಥಮ ಲತಾ ದೀನನಾಥ ಮಂಗೇಶ್ಕರ್‌ ಪ್ರಶಸ್ತಿಯನ್ನು ಪಡೆದುಕೊಂಡ ಪ್ರಧಾನಿ ಮೋದಿ

Update: 2022-04-25 06:43 GMT

ಮುಂಬೈ: ರವಿವಾರ ನಡೆದ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈಗೆ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಮೋದಿಯವರಿಗೆ ಚೊಚ್ಚಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾವುಕರಾದ ಪ್ರಧಾನಿ, ಲತಾ ಮಂಗೇಶ್ಕರ್ ಅವರು ಹಿರಿಯ ಸಹೋದರಿ ಇದ್ದಂತೆ ಎಂದರು. "ನನಗೆ ಲತಾ ದೀದಿ ಅಕ್ಕನಿದ್ದಂತೆ. ಅವರು ನನ್ನ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದರು. ಹಲವು ದಶಕಗಳ ನಂತರ, ಈ ಬಾರಿಯ ರಾಖಿ ಹಬ್ಬದಲ್ಲಿ ಲತಾ ದೀದಿ ಇರುವುದಿಲ್ಲ" ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರು ಈ ಪ್ರಶಸ್ತಿಯನ್ನು ತಮ್ಮ ದೇಶವಾಸಿಗಳಿಗೆ ಸಮರ್ಪಿಸಿದರು. "ಲತಾ ದೀದಿಯಂತಹ ಅಕ್ಕನ ಹೆಸರಿನಲ್ಲಿ ಪ್ರಶಸ್ತಿ ಬಂದಾಗ, ಅದು ಅವರ ಏಕತೆ ಮತ್ತು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿದೆ, ಆದ್ದರಿಂದ ನಾನು ಅದನ್ನು ಸ್ವೀಕರಿಸದೆ ಇರಲು ಸಾಧ್ಯವಿಲ್ಲ" ಎಂದೂ ಈ ಸಂದರ್ಭದಲ್ಲಿ ಮೋದಿ ತಿಳಿಸಿದರು. 

ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ರಾಷ್ಟ್ರ ನಿರ್ಮಾಣಕ್ಕೆ ಅನುಕರಣೀಯ ಕೊಡುಗೆ ನೀಡಿದ ವ್ಯಕ್ತಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕುಟುಂಬ ಮತ್ತು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News