ಐಪಿಎಲ್: ಕಿರೊನ್ ಪೊಲಾರ್ಡ್ ರೊಂದಿಗೆ ಕೃನಾಲ್ ಪಾಂಡ್ಯ ವರ್ತನೆಗೆ ಟ್ವಿಟರ್ ಬಳಕೆದಾರರ ಆಕ್ರೋಶ
ಮುಂಬೈ: ಈ ವರ್ಷ ಐಪಿಎಲ್ ನಲ್ಲಿ ಸತತ 8ನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ಮುಂದುವರಿಸಿದೆ.
ರವಿವಾರದಂದು ಮುಂಬೈ ತಂಡವನ್ನು ಲಕ್ನೊ ಸೂಪರ್ ಜೈಂಟ್ಸ್ ತಂಡವು 36 ರನ್‌ಗಳಿಂದ ಸೋಲಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.
ಇಶಾನ್ ಕಿಶನ್, ಕಿರೊನ್ ಪೊಲಾರ್ಡ್ ಅವರಂತಹ ಆಟಗಾರರು ಕಳಪೆ ಬ್ಯಾಟ್ ಮುಂದುವರೆಸುವುದರೊಂದಿಗೆ ಮುಂಬೈ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದೆ.
ಪೊಲಾರ್ಡ್ ಬೌಲಿಂಗ್ ನಲ್ಲಿ ಎರಡು ವಿಕೆಟ್ ಪಡೆದರು. ಆದರೆ ಮಾಜಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಪೊಲಾರ್ಡ್ ಅವರು 19 ರನ್ ಗಳಿಸಿ ಕೃನಾಲ್ ಪಾಂಡ್ಯಗೆ ಔಟಾದರು. ಪೊಲಾರ್ಡ್ ಅವರನ್ನು ಔಟ್ ಮಾಡಿದ ನಂತರ ಕೃನಾಲ್ ರ ವರ್ತನೆಗೆ ಟ್ವಿಟರ್‌ನಲ್ಲಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪೊಲಾರ್ಡ್ ವಿಕೆಟ್ ಪಡೆದ ನಂತರ ಪಾಂಡ್ಯ ಅವರು ಪೊಲಾರ್ಡ್ ಬಳಿಗೆ ಓಡಿ ಹೋಗಿ ಅವರ ತಲೆಗೆ ಮುತ್ತಿಟ್ಟರು. ಆದಾಗ್ಯೂ, ಇಬ್ಬರೂ ಕ್ರಿಕೆಟಿಗರು ಮೈದಾನದ ಹೊರಗೆ ಉತ್ತಮ ಸ್ನೇಹಿತರಾಗಿದ್ದರೂ ಕೂಡ ಪಾಂಡ್ಯ ಅವರ ವರ್ತನೆ ಟ್ವಿಟರ್ ಬಳಕೆದಾರರಿಗೆ ಇಷ್ಟವಾಗಲಿಲ್ಲ.
ಕೃನಾಲ್ ಪಾಂಡ್ಯ ಈ ರೀತಿಯ ವರ್ತಿಸುವುದರೊಂದಿಗೆ ತುಂಬಾ ಅಗೌರವದಿಂದ ವರ್ತಿಸಿದ್ದಾರೆ. ಪೊಲಾರ್ಡ್ ಅವರು ವಿಲ್ ಸ್ಮಿತ್ ರೀತಿ ವರ್ತಿಸಬೇಕಿತ್ತು ಎಂದು ಓರ್ವ ಟ್ವಿಟರ್ ಬಳಕೆದಾರ ಟ್ವೀಟಿಸಿದರು.
ಇದ್ದಕ್ಕಿದ್ದಂತೆ ಕೃನಾಲ್ ಪಾಂಡ್ಯ ಅವರು ತಮ್ಮ ಮಾಜಿ ತಂಡ 8 ಪಂದ್ಯಗಳಲ್ಲಿ ಸತತ ಸೋಲಿನ ಹಾದಿಯಲ್ಲಿದೆ ಎಂಬುದನ್ನು ಮರೆತಿದ್ದಾರೆ. ಪೊಲಾರ್ಡ್ ಆ ಬ್ಯಾಟ್‌ನಿಂದ ವಿಲ್ ಸ್ಮಿತ್ ಅವರಂತೆಯೇ ಮುಖಕ್ಕೆ ಕಪಾಳಮೋಕ್ಷ ಮಾಡಬೇಕಿತ್ತು ಎಂದು ಅಲೆಕ್ಸ್ ವಿನ್ಸನ್ ಎಂಬುವವರು ಟ್ವೀಟಿಸಿದರು.
ಪೊಲಾರ್ಡ್ ಆಕ್ರೋಶಗೊಂಡು ಈ ರೀತಿ ವರ್ತಿಸಬೇಕಿತ್ತು ಎಂದು ಪೊಲಾರ್ಡ್ ಅವರು ಬ್ಯಾಟ್ ನಿಂದ ಬೀಸುವ ಫೋಟೊವನ್ನು ಹಾಕಿ ಇನ್ನೋರ್ವ ಟ್ವಿಟರ್ ಬಳಕೆದಾರ ಟ್ವೀಟಿಸಿದರು.