ಉತ್ತರಪ್ರದೇಶದಲ್ಲಿ ಕುಟುಂಬವೊಂದರ ಐವರು ಸದಸ್ಯರ ಹತ್ಯೆ ಪ್ರಕರಣ ಮುಚ್ಚಿ ಹಾಕಲು ಯತ್ನ: ಟಿಎಂಸಿ ಆರೋಪ

Update: 2022-04-25 17:08 GMT

ಗುವಾಹತಿ, ಎ 25: ಉತ್ತರಪ್ರದೇಶದ ಖೇವರಾಜಪುರ ಗ್ರಾಮದಲ್ಲಿ ಕುಟುಂಬವೊಂದರ ಐವರು ಸದಸ್ಯರ ಹತ್ಯೆ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗುತ್ತಿದೆ ಎಂದು ಟಿಎಂಸಿ ಸೋಮವಾರ ಆರೋಪಿಸಿದೆ. ಹತ್ಯೆ ನಡೆಸುವ ಮುನ್ನ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಅದು ಹೇಳಿದೆ ಪ್ರಯಾಗ್ರಾಜ್ ಜಿಲ್ಲೆಯ ಖೇವರಾಜಪುರದಲ್ಲಿ ಶುಕ್ರವಾರ ರಾತ್ರಿ ಒಂದೇ ಕುಟುಂಬದ ಐವರು ಸದಸ್ಯರನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆಗೈಯಲಾಗಿತ್ತು. ಮೂರು ದಿನಗಳ ಹಿಂದೆ ನಡೆದ ಈ ಸಾಮೂಹಿಕ ಹತ್ಯೆಯ ಸಂದರ್ಭ ಬದುಕುಳಿದ ಕುಟುಬದ ಇತರ ಸದಸ್ಯರನ್ನು ಭೇಟಿಯಾಗಲು ಸತ್ಯ ಶೋಧನಾ ಸಮಿತಿ ನಿನ್ನೆ ಉತ್ತರಪ್ರದೇಶದ ಪ್ರಯಾಗ್ರಾಜ್ನ ಖೇವರಾಜಪುರಕ್ಕೆ ತೆರಳಿತ್ತು.

ಮೃತಪಟ್ಟ ಇಬ್ಬರು ಮಹಿಳೆಯ ನಗ್ನರಾಗಿದ್ದರು ಹಾಗೂ ಅವರ ಗುಪ್ತಾಂಗದಲ್ಲಿ ಗಾಯಗಳಾಗಿದ್ದವು ಎಂಬ ಆಘಾತಕಾರಿ ವಿಷಯವನ್ನು ಈ ಸಂದರ್ಭ ಕುಟುಂಬ ನಮಗೆ ತಿಳಿಸಿದೆ ಎಂದು ಟಿಎಂಸಿಯ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಸೋಮವಾರ ಟ್ವೀಟ್ ಮಾಡಿದ್ದಾರೆ. ಥಳಿಸಿ ಹತ್ಯೆಗೈಯುವ ಮುನ್ನ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಶಂಕೆ ಇರುವುದಾಗಿ ಕುಟುಂಬ ಪೊಲೀಸರಿಗೆ ತಿಳಿಸಿರುವುದಾಗಿ ಅವರು ಸರಣಿ ಟ್ವೀಟ್ನಲ್ಲಿ ಹೇಳಿದ್ದಾರೆ. ಕುಟುಂಬ ಹೇಳಿಕೆ ನೀಡಿದ ಹೊರತಾಗಿಯೂ ಪೊಲೀಸರು ಅತ್ಯಾಚಾರಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸ್ ಅಧೀಕ್ಷರನ್ನು ಪ್ರಶ್ನಿಸಿದಾಗ ಅವರು, ‘‘ಕುಟುಂಬ ಲಿಖತ ಹೇಳಿಕೆ ನೀಡಿಲ್ಲ’’ ಎಂದು ಹೇಳಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News