ಉಡುಪಿ ಕೃಷ್ಣ ಮಠದಲ್ಲಿ ಭಕ್ತರ ಸೊತ್ತು ಕಳವು
Update: 2022-04-26 21:36 IST
ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬಂದ ಭಕ್ತರೊಬ್ಬರ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವ ಘಟನೆ ಎ.25ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮುಂಬೈ ಥಾಣೆಯ ಶಾಂತಾ ಕುಂದರ್(70) ಎಂಬವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು ದೇವರ ದರ್ಶನ ಪಡೆದು ಊಟ ಮಾಡಿದ್ದು, ಈ ವೇಳೆ ಕಳ್ಳರು ಆಯುಧದಿಂದ ಶಾಂತಾ ಅವರ ಬ್ಯಾಗ್‌ನ್ನು ಕತ್ತರಿಸಿ, ಅದರಲ್ಲಿದ್ದ ಪರ್ಸ್ ಕಳವು ಮಾಡಿದ್ದಾರೆ. ಅದರಲ್ಲಿ 1.40 ಲಕ್ಷ ರೂ. ಮೌಲ್ಯದ ಹವಳದ ಸರ, ಆದಾರ್ ಕಾರ್ಡ್, ಪಾನ್‌ಕಾರ್ಡ್, ಸ್ವೈಪ್ ಕಾರ್ಡ್ ಹಾಗೂ 4 ಸಾವಿರ ರೂ. ಇದ್ದವು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.