ಉಕ್ರೇನ್ ಗೆ ದುಪ್ಪಟ್ಟು ಪ್ರಮಾಣದ ನೆರವಿನ ಅಗತ್ಯವಿದೆ: ವಿಶ್ವಸಂಸ್ಥೆ

Update: 2022-04-26 17:46 GMT

ಜಿನೆವಾ, ಎ.26: ಉಕ್ರೇನ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ನೀಡುವ ನೆರವನ್ನು ದುಪ್ಪಟ್ಟುಗೊಳಿಸುವುದು ಅನಿವಾರ್ಯವಾಗಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

ಯುದ್ಧ ಆರಂಭವಾದ ಒಂದು ವಾರದ ಬಳಿಕ, ಅಂದರೆ ಮಾರ್ಚ್ 1ರಂದು ಉಕ್ರೇನ್‌ಗೆ ನೆರವು ನೀಡುವಂತೆ ನಾವು ಮನವಿ ಮಾಡಿಕೊಂಡಾಗ 1.1 ಬಿಲಿಯನ್ ಡಾಲರ್ ನೆರವಿನ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಯುದ್ಧ ಇನ್ನೂ ಮುಂದುವರಿದಿರುವುದರಿಂದ ಯುದ್ಧಗ್ರಸ್ಥ ಉಕ್ರೇನ್‌ಗೆ 2.25 ಬಿಲಿಯನ್ ಡಾಲರ್ ನೆರವು ಅಂದರೆ ದುಪ್ಪಟ್ಟು ಪ್ರಮಾಣದ ನೆರವು ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವಿನ ಏಜೆನ್ಸಿ ಒಸಿಎಚ್ಎ ಹೇಳಿದೆ.

44 ಮಿಲಿಯನ್ ಜನಸಂಖ್ಯೆಯಿರುವ ಉಕ್ರೇನ್‌ನಲ್ಲಿ ಯುದ್ಧದ ಕಾರಣದಿಂದಾಗಿ ಸುಮಾರು 15.7 ಮಿಲಿಯನ್ ಜನತೆ ಈಗ ನೆರವಿನ ಅಗತ್ಯದಲ್ಲಿದ್ದಾರೆ. 7 ಮಿಲಿಯನ್ಗೂ ಅಧಿಕ ಮಂದಿ ಆಂತರಿಕವಾಗಿ ಸ್ಥಳಾಂತರಗೊಂಡಿದ್ದರೆ 5.2 ಮಿಲಿಯನ್ ಜನತೆ ಗಡಿದಾಟಿ ನೆರೆಯ ದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News