ಉದ್ಯೋಗದಿಂದ ವಜಾಗೊಳಿಸಿದ ಸಿಟ್ಟು: ಮಹಿಳೆಗೆ ಬೆಂಕಿ ಹಚ್ಚಿದ ಉದ್ಯೋಗಿ

Update: 2022-04-27 04:01 GMT

ಪುಣೆ: ಉದ್ಯೋಗದಿಂದ ವಜಾಗೊಳಿಸಿದ ಸಿಟ್ಟಿನಲ್ಲಿ ಉದ್ಯೋಗಿಯೊಬ್ಬ ಮಹಿಳೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಸುಟ್ಟಗಾಯಗಳಿಂದ ಇಬ್ಬರೂ ಮೃತಪಟ್ಟಿದ್ದಾರೆ.

ಇಬ್ಬರ ನಡುವಿನ ವ್ಯಾಜ್ಯವನ್ನು ಇತ್ಯರ್ಥಪಡಿಲು ಮಧ್ಯಪ್ರವೇಶಿಸಿದ ಮತ್ತೊಬ್ಬ ವ್ಯಕ್ತಿಗೆ ತೀವ್ರ ಸುಟ್ಟಗಾಯಗಳಾಗಿವೆ. ಸೋಮವಾರ ರಾತ್ರಿ ಪುಣೆಯ ಸೋಮನಾಥ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

"ಮಿಲಿಂದ್ ನಾಥಸಾಗರ್ ಎಂಬಾತ ಬಾಳಾ ಜನಿಂಗ್ಸ್ ಟೈಲ‌ರ್‌ ಶಾಪ್‍ನಲ್ಲಿ ಉದ್ಯೋಗಕ್ಕಿದ್ದ. ಬಾಳಾ ಜನಿಂಗ್ಸ್ ಎಂಟು ದಿನ ಹಿಂದೆ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಈ ಸಿಟ್ಟಿನಲ್ಲಿ ನಾಥಸಾಗರ್ ರಾತ್ರಿ 11ರ ವೇಳೆಗೆ ಅಂಗಡಿಗೆ ತೆರಳಿ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ" ಎಂದು ಇನ್‍ಸ್ಪೆಕ್ಟರ್ ಸುನೀಲ್ ಜಾಧವ್ ಹೇಳಿದ್ದಾರೆ.

ಈ ಸಂದರ್ಭ ನಾಥಸಾಗರ್ ಗೆ ಕೂಡಾ ತೀವ್ರ ಸುಟ್ಟಗಾಯಗಳಾಗಿದ್ದು, ಮಂಗಳವಾರ ನಸುಕಿನಲ್ಲಿ ಆತ ಮೃತಪಟ್ಟ. ಶೇಕಡ 90ರಷ್ಟು ಸುಟ್ಟಗಾಯಗಳಾಗಿದ್ದ ಜನಿಂಗ್ (32) ಆ ಬಳಿಕ ಮೃತಪಟ್ಟರು. ಇಬ್ಬರ ಜಗಳವನ್ನು ಬಿಡಿಸಲು ಬಂದಿದ್ದ ಪಕ್ಕದ ಮೊಬೈಲ್ ಅಂಗಡಿಯ ವ್ಯಕ್ತಿಗೆ ಶೇಕಡ 35ರಷ್ಟು ಸುಟ್ಟಗಾಯಗಳಾಗಿವೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News