ಹವಾಮಾನ ವೈಪರಿತ್ಯ: ವೆಬ್‌ಸೈಟ್‌ನಲ್ಲಿ ಮಾಹಿತಿ
Update: 2022-04-27 19:09 IST
ಉಡುಪಿ : ಮಾನ್ಸೂನ್ ಪೂರ್ವ ಮಳೆ ಈಗಾಗಲೇ ಪ್ರಾರಂಭ ವಾಗಿದ್ದು, ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಈ ಅವಧಿಯಲ್ಲಿ ಚಂಡಮಾರುತಗಳು ಬೀಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅತಿಯಾದ ಮಳೆ ಹಾಗೂ ಜೋರಾದ ಗಾಳಿ ಭೂಮಿಯ ಕಡೆಗೆ ಬೀಸುವ ಸಾಧ್ಯತೆಗಳಿವೆ.
ಈ ಬಗ್ಗೆ ಪ್ರತಿದಿನದ ಮುನ್ಸೂಚನೆಗಳನ್ನು ವೆಬ್‌ಸೈಟ್ -mausam.imd.gov.in/bengaluru-ನಲ್ಲಿ ಮಾಹಿತಿ ಗಳನ್ನು ಪಡೆಯ ಬಹುದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.