ಕಾಸರಗೋಡು : ಮಾದಕ ವಸ್ತು ಸಾಗಾಟ ; ಆರೋಪಿ ಸೆರೆ
Update: 2022-04-28 13:59 IST
ಕಾಸರಗೋಡು : ಸುಮಾರು 10 ಲಕ್ಷ ರೂ.ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಡಿವೈಎಸ್ಪಿ ವಿ.ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾಸರಗೋಡು ರೈಲ್ವೆ ನಿಲ್ದಾಣ ಪರಿಸರದ ಹವಾಜ್ ಕೆ.ಪಿ (28) ಎಂದು ಗುರುತಿಸಲಾಗಿದೆ.
ಈತ ದೆಹಲಿಯಿಂದ ಮಾದಕ ವಸ್ತುವನ್ನು ಕಾಸರಗೋಡಿಗೆ ತಲಪಿಸುವ ಜಾಲದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ