ಸಿಂಗಾಪುರ: ಭಾರತೀಯ ಮೂಲದ ವ್ಯಕ್ತಿಯ ಗಲ್ಲು ಶಿಕ್ಷೆಗೆ ಕೋರ್ಟ್ ತಡೆಯಾಜ್ಞೆ

Update: 2022-04-29 18:33 GMT

ಸಿಂಗಾಪುರ,ಎ.29: ಮಾದಕದ್ರವ್ಯ ಕಳ್ಳಸಾಗಣೆಯ ಪ್ರಕರಣದ ಅಪರಾಧಿಯಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ವಿಧಿಸಲಾಗಿದ್ದ ಮರಣದಂಡನೆಗೆ ಸಿಂಗಾಪುರದ ನ್ಯಾಯಾಲಯವು ಗುರುವಾರ ತಡೆಯಾಜ್ಞೆಯನ್ನು ನೀಡಿದೆ.

  ಮಾದಕದ್ರವ್ಯ ಕಳ್ಳಸಾಗಣೆಯ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಚಾಂಗಿ ಕಾರಾಗೃದಲ್ಲಿ ಗಲ್ಲಿಗೇರಿಸಿದ ಮರುದಿನವೇ ನ್ಯಾಯಾಲು ಈ ತೀರ್ಪು ನೀಡಿದೆ. ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣದ ಆರೋಪಿ ದಕ್ಷಿಣಾಮೂರ್ತಿ ಕಾಟಯ್ಯ (36) ನನ್ನು ಶುಕ್ರವಾರ ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ತಮಗೆ ಮರಣದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಕಾಟಯ್ಯ ಹಾಗೂ ಇತರ 12 ಮಂದಿ ಗಲ್ಲುಶಿಕ್ಷೆಗೆ ಗುರಿಯಾದ ಆರೋಪಿಗಳು ನ್ಯಾಯಾಲಯಕ್ಕೆ ಮೇಲ್ಮನವಿ ಸಲಿಸಿದ್ದರು. ತಮ್ಮ ಖಾಸಗಿ ಪತ್ರಗಳನ್ನು ಬಹಿರಂಗಪಡಿಸಿರುವುದರ ಬಗ್ಗೆ ಮಾನಹಾನಿಯಾಗಿದ್ದು, ಅದಕ್ಕೆ ಪರಿಹಾರ ನೀಡಬೇಕೆಂದು ಕೋರಿ ಅವರು ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಆಲಿಕೆಯನ್ನು ಮೇ 20ಕ್ಕೆ ನಿಗದಿಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹೈಕೋರ್ಟ್ನಲ್ಲಿ ದಕ್ಷಿಣಾಮೂರ್ತಿ ಸ್ವಯಂ ತನ್ನ ಪರ ವಾದ ಮಂಡಿಸಿದ್ದನು.ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ದಕ್ಷಿಣಾಮೂರ್ತಿಯನ್ನು ದೋಷಿಯೆಂದು ಪರಿಗಣಿಸಿದ ಸಿಂಗಾಪುರ ಹೈಕೋರ್ಟ್ ಆತನಿಗೆ 2015ರ ಎಪ್ರಿಲ್ನಲ್ಲಿ ಮರಣದಂಡನೆ ಘೋಷಿಸಿತ್ತು. ತೀರ್ಪಿನ ವಿರುದ್ಧ ಆತ ಸಲ್ಲಿಸಿದ ಮೇಲ್ಮನವಿಯನ್ನು 2016ರ ಫೆಬ್ರವರಿಯಲ್ಲಿ ನ್ಯಾಯಾಲಯ ತಳ್ಳಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News