ವಿಶ್ವಸಂಸ್ಥೆಯ ಮುಖ್ಯಸ್ಥರ ಭೇಟಿ ಸಂದರ್ಭದಲ್ಲೇ ಉಕ್ರೇನ್ ರಾಜಧಾನಿಗೆ ಅಪ್ಪಳಿಸಿದ ರಶ್ಯದ ಕ್ಷಿಪಣಿಗಳು

Update: 2022-04-29 09:58 GMT
Photo: AFP

ಕೀವ್: ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಗುರುವಾರ ಉಕ್ರೇನ್ ರಾಜಧಾನಿಗೆ ಭೇಟಿ ನೀಡಿದ ಸಂದರ್ಭದಲ್ಲೇ  ರಶ್ಯವು  ಎರಡು ಕ್ಷಿಪಣಿಗಳೊಂದಿಗೆ ಕೀವ್ ಮೇಲೆ ದಾಳಿ ಮಾಡಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಕ್ಷಿಪಣಿಗಳು 25 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ಅಪ್ಪಳಿಸಿ ಎರಡು ಮಹಡಿಗಳನ್ನು ನಾಶಪಡಿಸಿದ್ದರಿಂದ ಹತ್ತು ನಿವಾಸಿಗಳು ಗಾಯಗೊಂಡಿದ್ದಾರೆ.

ವಿಶ್ವಸಂಸ್ಥೆಯ ತಂಡವು ದಾಳಿಯಿಂದ ತತ್ತರಿಸಿದೆ, ಆದರೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜಾಗತಿಕ ಸಂಸ್ಥೆಯ ವಕ್ತಾರ ಸವಿಯಾನೊ ಅಬ್ರೂ ಹೇಳಿದ್ದಾರೆ.

"ಇದು ಯುದ್ಧದ ಪ್ರದೇಶವಾಗಿದೆ.  ಆದರೆ ಕ್ಷಿಪಣಿ ದಾಳಿ ನಮ್ಮ ಹತ್ತಿರವೇ ನಡೆದಿರುವುದು ಆಘಾತಕಾರಿಯಾಗಿದೆ" ಎಂದು ಅವರು ಹೇಳಿದರು.

ಎಪ್ರಿಲ್ 3 ರಂದು, ರಶ್ಯದ ಪಡೆಗಳನ್ನು ನಗರದಿಂದ ಹಿಮ್ಮೆಟ್ಟಿಸಿದ ನಂತರ ಕೀವ್ ಮೇಲೆ ಹಿಡಿತ ಸಾಧಿಸಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿತ್ತು.

ಗುರುವಾರ ನಡೆದ ದಾಳಿಯು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳ ಬಗ್ಗೆ ರಶ್ಯದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News