ಕೋಮು ಪ್ರಚೋದಕ ಹೇಳಿಕೆ:‌ ಗೋವಾದ ಮಾಜಿ ಆರೆಸ್ಸೆಸ್ ವರಿಷ್ಠನ ವಿರುದ್ಧ ಮಾಜಿ ಸಚಿವರಿಂದ ದೂರು ಸಲ್ಲಿಕೆ

Update: 2022-04-29 15:00 GMT
photo:twitter(subhash velingkar,mickkypacheco)

ಪಣಐ,ಎ.29: ಗೋವಾದ ಮಾಜಿ ಸಚಿವ ಫ್ರಾನ್ಸಿಸ್ಕೋ ಮಿಕ್ಕಿ ಪಚೆಕೋ ಅವರು ಎರಡು ಕೋಮುಗಳ ನಡುವೆ ಸೌಹಾರ್ದವನ್ನು ಕೆಡಿಸುವ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವ ಆರೋಪದಲ್ಲಿ ರಾಜ್ಯ ಆರೆಸ್ಸೆಸ್ ಘಟಕದ ಮಾಜಿ ಮುಖ್ಯಸ್ಥ ಸುಭಾಷ ವೆಲಿಂಗಕರ್ ವಿರುದ್ಧ ಶುಕ್ರವಾರ ಪೊಲೀಸ್ ದೂರನ್ನು ಸಲ್ಲಿಸಿದ್ದಾರೆ.

ಗುರುವಾರ ಹಿಂದು ರಕ್ಷಾ ಮಹಾ ಅಘಾಡಿಯ ಸುದ್ದಿಗೋಷ್ಠಿಯಲ್ಲಿ ವೆಲಿಂಗಕರ್ ಸಂತ ಫ್ರಾನ್ಸಿಸ್ ಝೇವಿಯರ್ ಅವರು ವಿಚಾರಣೆಗಳ ಸಂದರ್ಭದಲ್ಲಿ ದೌರ್ಜನ್ಯಗಳನ್ನು ಎಸಗಿದ್ದರಿಂದ ಅವರನ್ನು ‘ಗೊಯೆಂಚೊ ಸಾಯ್ಬಿ(ಗೋವಾದ ಪೋಷಕ ಸಂತ)’ರನ್ನಾಗಿ ಆರಾಧಿಸಬಾರದು ಮತ್ತು ಮಹರ್ಷಿ ಪರಶುರಾಮ ಅವರು ನಿಜವಾದ ‘ಗೊಯೆಂಚೊ ಸಾಯ್ಬಾ’ಆಗಿದ್ದಾರೆ ಎಂದು ಹೇಳಿದ್ದರು ಎಂದು ಮಾಜಿ ಪ್ರವಾಸೋದ್ಯಮ ಸಚಿವ ಪಚೆಕೋ ದಕ್ಷಿಣ ಗೋವಾದ ಕೊಲ್ವಾ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಕೋಮು ಸೌಹಾರ್ದವನ್ನು ಕೆಡಿಸುವ ಏಕೈಕ ಉದ್ದೇಶದಿಂದ ವೆಲಿಂಗಕರ್ ವಿಷವನ್ನು ಕಾರಿದ್ದಾರೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾರೆ. ಕೆಲವು ದುಷ್ಟಶಕ್ತಿಗಳ ಒತ್ತಾಸೆಯಂತೆ ಅವರು ಸಮುದಾಯಗಳ ನಡುವೆ ದ್ವೇಷ ಸೃಷ್ಟಿ ಮಾತ್ರವಲ್ಲ,ದೇಶವನ್ನು ಅಸ್ಥಿರಗೊಳಿಸಲು ನಾಗರಿಕ ಅಶಾಂತಿಯನ್ನೂ ಸೃಷ್ಟಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದು ಪಚೆಕೋ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News