ಉಕ್ರೇನ್ನಲ್ಲಿ ರಶ್ಯದ ಯುದ್ಧಪರಾಧಗಳ ತನಿಖೆ ನಡೆಸಲು ಬ್ರಿಟನ್ ನಿಂದ ತಜ್ಞರ ತಂಡ ನೇಮಕ

Update: 2022-04-29 18:40 GMT
PHOTO:TWITTER/@Reuters

ಲಂಡನ್,ಎ.29: ಉಕ್ರೇನ್ನಲ್ಲಿ ರಶ್ಯ ನಡೆಸಿದ ಯುದ್ಧಪರಾಧಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಉಕ್ರೇನ್ಗೆ ನೆರವಾಗಲು ಬ್ರಿಟನ್ ತಜ್ಞರ ತಂಡವೊಂದನ್ನು ನಿಯೋಜಿಸಲಿದೆಯೆಂದು ಬ್ರಿಟಿಶ್ ವಿದೇಶಾಂಗ ಕಾರ್ಯದರ್ಶಿ ಲಿಝ್ ಟ್ರುಸ್ ಶುಕ್ರವಾರ ತಿಳಿಸಿದ್ದಾರೆ.
     

ಪರಿಣಿತರ ತಂಡವು ಉಕ್ರೇನ್ ಸರಕಾರಕ್ಕೆ ನೆರವಾಗಲಿದ್ದು, ರಶ್ಯವು ಎಸಗಿರುವ ಯುದ್ಧಪರಾಧಗಳ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲಿದೆ ಹಾಗೂ ವಿಚಾರಣೆಯನ್ನು ನಡೆಸಲಿದೆ. ಸಂಘರ್ಷದ ಸನ್ನಿವೇಶದಲ್ಲಿ ನಡೆಯುವ ಲೈಂಗಿಕ ಹಿಂಸಾಚಾರದ ಬಗ್ಗೆಯೂ ತಂಡ ತನಿಖೆ ನಡೆಸಲಿದೆ ಎಂದು ಲಿಝ್ ತಿಳಿಸಿದ್ದಾರೆ. ಮೇ ತಿಂಗಳ ಮೊದಲ ವಾರದಲ್ಲಿ ತಜ್ಞರ ತಂಡವು ಪೊಲ್ಯಾಂಡ್ಗೆ ಆಗಮಿಸಲಿದ್ದು, ಅಂತಾರಾಷ್ಟ್ರೀಯ ಪಾಲುದಾರರನ್ನು, ಎನ್ಜಿಓಗಳನ್ನು, ನಿರಾಶ್ರಿತರನ್ನು ಮತ್ತು ಉಕ್ರೇನ್ ಸರಕಾರದ ಪ್ರಮುಖ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.
   

‘‘ರಶ್ಯವು ಉಕ್ರೇನ್ಗೆ ಬರ್ಬರತೆಯನ್ನು ತಂದಿದೆ ಹಾಗೂ ಮಹಿಳೆಯರ ವಿರುದ್ಧವೂ ಸೇರಿದಂತೆ ನಾಗರಿಕರ ಮೇಲೆ ಭೀಕರವಾದ ದೌರ್ಜನ್ಯಗಳನ್ನು ಎಸಗಿದೆ. ಈ ಸತ್ಯವನ್ನು ಅನಾವರಣಗೊಳಿಸಲು ಬ್ರಿಟನ್ನ ಪರಿಣಿತರು ನೆರವಾಗಲಿದ್ದಾರೆ ಮತ್ತು ಸಂತ್ರಸ್ತರಿಗೆ ನ್ಯಾಯ ದೊರೆಯಲಿದೆ ಎಂದು ಟ್ರುಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News