ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ : ಅಮೆರಿಕ, ನೇಟೊಗೆ ರಶ್ಯ ಆಗ್ರಹ

Update: 2022-04-30 19:02 GMT

ಮಾಸ್ಕೊ, ಎ.30: ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ನಿಜಕ್ಕೂ ಆಸಕ್ತಿಯಿದ್ದರೆ ಮೊದಲು ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸುವುದನ್ನು ನಿಲ್ಲಿಸಿ ಎಂದು ರಶ್ಯದ ವಿದೇಶ ಸಚಿವರು ಅಮೆರಿಕ ಮತ್ತು ನೇಟೊ ದೇಶಗಳನ್ನು ಆಗ್ರಹಿಸಿದ್ದಾರೆ.

 ಉಕ್ರೇನ್ನಲ್ಲಿ ನಡೆಸಲಾಗುತ್ತಿರುವ ವಿಶೇಷ ಕಾರ್ಯಾಚರಣೆ ಯೋಜಿಸಿದ ರೀತಿಯಲ್ಲಿಯೇ ಮುಂದುವರಿಯುತ್ತಿದೆ. ಉಕ್ರೇನ್ನಲ್ಲಿನ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಆಸಕ್ತಿಯಿದ್ದರೆ ಅಮೆರಿಕ ಮತ್ತು ನೇಟೊ ದೇಶಗಳು ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಚೀನಾದ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಕ್ಸಿನ್ಹುವಾಗೆ ನೀಡಿದ ಸಂದರ್ಶನದಲ್ಲಿ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.
ತನ್ನ ವಿರುದ್ಧದ ನಿರ್ಬಂಧ ಹಾಗೂ ಉಕ್ರೇನ್ ಗೆ ಶಸ್ತ್ರಾಸ್ತ್ರ ರವಾನೆ ಉಭಯ ದೇಶಗಳ ನಡುವಿನ ಸಂಧಾನ ಮಾತುಕತೆಗೆ ತೊಡಕಾಗಿದೆ. ಸಂಧಾನ ಮಾತುಕತೆ ಮುಂದುವರಿಯಲಿದೆ, ಆದರೆ ಪ್ರಗತಿ ಸಾಧಿಸುವುದು ಕಷ್ಟವಾಗಬಹುದು ಎಂದು ಲಾವ್ರೋವ್ ಹೇಳಿದರು.
  ಈ ಮಧ್ಯೆ, ಪೋಲ್ಯಾಂಡಿನ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಯಾವುದೇ ಒಪ್ಪಂದಕ್ಕೆ ಬಾರದೆ ಸಂಧಾನ ಮಾತುಕತೆ ಅಂತ್ಯವಾಗುವ ಅಪಾಯವಿದೆ ಎಂದರು. ಅಮೆರಿಕ ಹಾಗೂ ಯುರೋಪ್ನ ಹಲವು ದೇಶಗಳು ಉಕ್ರೇನ್ಗೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಒದಗಿಸುತ್ತಿವೆ. ಉಕ್ರೇನ್ಗೆ 33 ಬಿಲಿಯನ್ ಡಾಲರ್ ನೆರವು ಒದಗಿಸುವ ನಿರ್ಣಯಕ್ಕೆ ಅನುಮೋದನೆ ನೀಡುವಂತೆ ಅಮೆರಿಕದ ಅಧ್ಯಕ್ಷ ಬೈಡನ್ ಸಂಸತ್ತನ್ನು ಕೋರಿದ್ದಾರೆ. ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಿ ಎಂದು ರಶ್ಯ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News