ಉಕ್ರೇನ್ ಸಂಘರ್ಷ: ಕೈಕಟ್ಟಿ, ತಲೆಗೆ ಗುಂಡು ಹೊಡೆದ ಮೃತದೇಹಗಳು ಪತ್ತೆ

Update: 2022-05-01 01:43 GMT

ಕೀವ್: ಯುದ್ಧಪೀಡಿತ ಉಕ್ರೇನ್‍ನ ಬುಚ್ಚಾ ಪಟ್ಟಣದ ಬಳಿ ಕೈಗಳನ್ನು ಕಟ್ಟಿ ತಲೆಗೆ ಗುಂಡು ಹೊಡೆದು ಸಾಯಿಸಿದ ಮೂರು ಮೃತದೇಹಗಳು ಪತ್ತೆಯಾಗಿವೆ ಎಂದು ಉಕ್ರೇನ್ ಪೊಲೀಸರು ಹೇಳಿದ್ದಾರೆ. ಇದು ರಷ್ಯಾ ವಿರುದ್ಧದ ಯುದ್ಧಾಪರಾಧಗಳಿಗೆ ಪುಷ್ಟಿ ನೀಡಿದೆ.

ರಷ್ಯನ್ ಸೈನಿಕರಿಂದ ಈ ಕ್ರೂರ ಹತ್ಯೆಗೀಡಾದ ವ್ಯಕ್ತಿಗಳ ಶವಗಳು ಹೊಂಡಗಳಲ್ಲಿ ಪತ್ತೆಯಾಗಿವೆ. ಮೂರೂ ಪ್ರಕರಣಗಳಲ್ಲಿ ತಲೆಗೆ ಗುಂಡು ಹೊಡೆದು ಸಾಯಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಸಂತ್ರಸ್ತರ ಕೈಗಳನ್ನು ಕಟ್ಟಲಾಗಿತ್ತು. ಅವರ ಕಣ್ಣುಗಳಿಗೆ ಬಟ್ಟೆ ಕಟ್ಟಲಾಗಿತ್ತು. ಹಾಗೂ ಕೆಲವರ ಕಣ್ಣು ಕೀಳಲಾಗಿತ್ತು. ಶವಗಳಲ್ಲಿ ಚಿತ್ರಹಿಂಸೆಯ ಕುರುಹುಗಳು ಪತ್ತೆಯಾಗಿವೆ ಎಂದು ವಿವರಿಸಿದ್ದಾರೆ.

ರಷ್ಯಾದ ನಿರ್ದಯ ಶೆಲ್ ದಾಳಿ ಪೂರ್ವ ಉಕ್ರೇನ್‍ನಲ್ಲಿ ಮುಂದುವರಿದಿದ್ದು, ಕನಿಷ್ಠ ಒಬ್ಬ ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ. ಒಡೆಸ್ಸಾದಲ್ಲಿ ರಷ್ಯಾ ಕ್ಷಿಪಣಿ ದಾಳಿಯಿಂದ ವಿಮಾನ ನಿಲ್ದಾಣದ ರನ್‍ವೇಗ್ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ಮ್ಯಾಕ್ಸಿಮ್ ಮರ್ಚೆಂಕೊ ಹೇಳಿದ್ದಾರೆ.

ರಷ್ಯಾ ಪಶ್ಚಿಮ ಉಕ್ರೇನ್‍ನ ಮೂಲಸೌಕರ್ಯ ಮತ್ತು ಪೂರೈಕೆ ಮಾರ್ಗಗಳನ್ನು ಗುರಿ ಮಾಡುತ್ತಿದೆ. ವಿಮಾನ ನಿಲ್ದಾಣ ದಾಳಿಯಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News