×
Ad

ಪಟಿಯಾಲ ಗುಂಪು ಘರ್ಷಣೆ: ಪ್ರಮುಖ ಆರೋಪಿ ಬರ್ಜಿಂದರ್ ಸಿಂಗ್ ಪರ್ವಾನಾ ಬಂಧನ

Update: 2022-05-01 12:42 IST

ಮೊಹಾಲಿ: ಪಟಿಯಾಲಾ ಗುಂಪು ಘರ್ಷಣೆಯ ಪ್ರಮುಖ ಆರೋಪಿ ಹಾಗೂ  ಪ್ರಮುಖ ಸಂಚುಕೋರ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಮೊಹಾಲಿಯಲ್ಲಿ ಪೊಲೀಸರು ರವಿವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಆರೋಪಿಯನ್ನು ಮುಂಬೈನಿಂದ ವಿಸ್ತಾರಾ ವಿಮಾನದ ಮೂಲಕ ಮೊಹಾಲಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7.20ಕ್ಕೆ ಕರೆತರಲಾಗಿತ್ತು. ಇನ್‌ಸ್ಪೆಕ್ಟರ್ ಶಮೀಂದರ್ ಸಿಂಗ್ ನೇತೃತ್ವದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಪಟಿಯಾಲ ತಂಡ ಮೊಹಾಲಿ ವಿಮಾನ ನಿಲ್ದಾಣದಲ್ಲಿ ಪರ್ವಾನಾನನ್ನು ಬಂಧಿಸಿದೆ.

ಶುಕ್ರವಾರ ಕಾಳಿ ಮಾತಾ ದೇವಸ್ಥಾನದ ಹೊರಗೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಪಟಿಯಾಲದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರು ಗಾಯಗೊಂಡರು.

  ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಪೊಲೀಸರು ಆರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಹಾಗೂ  ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಐಜಿ ಎಂ.ಎಸ್. ಚೀನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News