ಅಮೆರಿಕಾದ ಸಿಐಎಯ ಪ್ರಥಮ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಭಾರತೀಯ ಮೂಲದ ವ್ಯಕ್ತಿ ನೇಮಕ

Update: 2022-05-01 17:20 GMT

ವಾಷಿಂಗ್ಟನ್, ಮೇ 1: ಭಾರತೀಯ ಮೂಲದ ನಂದ್ ಮೂಲ್ ಚಂದಾನಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ)ಯ ಪ್ರಪ್ರಥಮ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಮೂಲ್ ಚಂದಾನಿ ಸಿಲಿಕಾನ್ ವ್ಯಾಲಿ (ಅಮೆರಿಕದ ಉನ್ನತ ತಂತ್ರಜ್ಞಾನ ಸಂಸ್ಥೆಗಳ ಕೇಂದ್ರಸ್ಥಾನ) ಮತ್ತು ರಕ್ಷಣಾ ಇಲಾಖೆಯಲ್ಲಿ 25 ವರ್ಷಕ್ಕೂ ಅಧಿಕ ಸೇವಾನುಭವ ಹೊಂದಿದ್ದಾರೆ. ಖಾಸಗಿ ಕ್ಷೇತ್ರ, ನವೋದ್ಯಮ ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವನ್ನು ಅವರು ಸಿಐಗೆ ವರ್ಗಾಯಿಸಲಿದ್ದಾರೆ ಎಂದು ಸಿಐಎ (ಅಮೆರಿಕದ ಗುಪ್ತಚರ ಸಂಸ್ಥೆ) ನಿರ್ದೇಶಕ ವಿಲಿಯಮ್ ಜೆ ಬರ್ನ್ಸ್ ಹೇಳಿದ್ದಾರೆ.

ತಂತ್ರಜ್ಞಾನ ಮತ್ತು ನೂತನ ಸಿಟಿಒ ಹುದ್ದೆ ಈ ಪ್ರಯತ್ನದ ಒಂದು ಪ್ರಮುಖ ಭಾಗವೆಂದು ನನ್ನ ಅನಿಸಿಕೆ. ಈ ಮಹತ್ವದ ಹುದ್ದೆಗೆ ತಮ್ಮ ವ್ಯಾಪಕ ಅನುಭವವನ್ನು ಮೂಲ್ಚಂದಾನಿ ಧಾರೆ ಎರೆಯಲಿದ್ದಾರೆ ಎಂದು ಆಶಿಸುತ್ತೇನೆ. ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಸಂಸ್ಥೆಯ ಅತ್ಯಾಧುನಿಕ ಆವಿಷ್ಕಾರಗಳನ್ನು ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಬಳಸಿಕೊಂಡು ಸಿಐಎಯ ಧ್ಯೇಯವನ್ನು ಮುಂದುವರಿಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News