×
Ad

ಸೋಮವಾರ 30ನೆ ಉಪವಾಸ, ​ಮಂಗಳವಾರ ಈದ್ : ದ.ಕ., ಉಡುಪಿ ಖಾಝಿಗಳ ಸ್ಪಷ್ಟನೆ

Update: 2022-05-01 23:36 IST
ತ್ವಾಕ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ 

ಮಂಗಳೂರು, ಮೇ‌ 1: ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನವಾಗದ ಕಾರಣ ದ.ಕ. ಮತ್ತು ಉಡುಪಿ‌ ಜಿಲ್ಲೆಗಳಲ್ಲಿ ಮಂಗಳವಾರವೇ (ಮೇ 3) ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಖಾಝಿಗಳಾದ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಫಝಲ್ ಕೋಯಮ್ಮ ಮದನಿ ಕೂರತ್ ತಂಙಳ್  ಘೋಷಿಸಿದ್ದಾರೆ.

ಉಡುಪಿ ಜಿಲ್ಲೆಯ ಕೆಲವು‌ ಮಸೀದಿ ವ್ಯಾಪ್ತಿಯಲ್ಲಿ ‌ಸೋಮವಾರ ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಗೊಂದಲ ನಿವಾರಿಸುವ ಸಲುವಾಗಿ ಮೂವರು ಖಾಝಿಗಳು ಪರಸ್ಪರ ಚರ್ಚೆ ನಡೆಸಿ ಮಂಗಳವಾರವೇ ಈದುಲ್ ಫಿತ್ರ್ ಆಚರಿಸಲು‌ ನಿರ್ಧರಿಸಿದ್ದಾರೆ.

ಹಾಗಾಗಿ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್ ಹಾಗೂ ಮಂಗಳೂರು ಈದ್ಗಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ‌ಕುಂಞಿ ಹಾಗು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್‌ ರಶೀದ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News