ಹಿಮಾಲಯ, ಹಿಂದೂ ಮಹಾಸಾಗರದ ನಡುವೆ ಜೀವಿಸುವವರು ಎಲ್ಲರೂ ಹಿಂದೂಗಳು: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ

Update: 2022-05-01 18:37 GMT

ಹೈದರಾಬಾದ್, ಮೇ 1: ‘ಹಿಂದೂ’ ಎಂದರೆ ಭೌಗೋಳಿಕ ಗುರುತು. ಹಿಮಾಲಯ ಹಾಗೂ ಹಿಂದೂ ಮಹಾಸಾಗರದ ನಡುವಿನ ಭೂಮಿಯಲ್ಲಿ ಜೀವಿಸುವ ಎಲ್ಲ ಜನರು ಹಿಂದೂಗಳು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಶನಿವಾರ ಪ್ರತಿಪಾದಿಸಿದ್ದಾರೆ. ಹೈದರಾಬಾದ್ನ ಭಾರತ್ ನೀತಿ ಆರ್ಗನೈಸೇಶನ್ ಆಯೋಜಿಸಿದ್ದ ‘ಡಿಜಿಟಲ್ ಹಿಂದೂ ಸಮಾವೇಶ’ದಲ್ಲಿ ಅವರು ಮಾತನಾಡಿದರು. ನಮ್ಮ ದೇಶ ಜ್ಞಾನ ಭೂಮಿ ಎಂಬ ಸತ್ಯವನ್ನು ಹಲವು ವಿದೇಶಿ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ನಾವು ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಬೇಕು ಎಂದು ಅವರು ಹೇಳಿದರು.

‘‘ಹಿಂದುತ್ವ ಬದುಕಿನ ದಾರಿ ಎಂಬುದು ನನ್ನ ಭಾವನೆ. ಹಿಂದೂ ಪದವನ್ನು ನಾವು ನಿರ್ದಿಷ್ಟ ವ್ಯಾಪ್ತಿಗೆ ಎಂದಿಗೂ ಸೀಮಿತಗೊಳಿಸಬಾರದು’’ ಎಂದು ಚೌಬೆ ತಿಳಿಸಿದರು.

ಚೌಬೆ ಅಲ್ಲದೆ ಬಿಜೆಪಿಯ ಹಿರಿಯ ನಾಯಕ ಮುರಳೀಧರ ರಾವ್ ಹಾಗೂ ಪಕ್ಷದ ಸಂಸದ ಮನೋಜ್ ತೀವಾರಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News