ತಮಿಳುನಾಡು: ಜಾತಿ ಹೆಸರು ಸೂಚಿಸುವ ರಿಸ್ಟ್ ಬ್ಯಾಂಡ್ ಹಾಕಿದ ಕುರಿತು ಘರ್ಷಣೆ; 12ನೇ ತರಗತಿ ವಿದ್ಯಾರ್ಥಿ ಸಾವು

Update: 2022-05-01 18:45 GMT
ಸೆಲ್ವ ಸೂರ್ಯ

ಚೆನ್ನೈ: ಜಾತಿ ಹೆಸರು ಸೂಚಿಸುವ ರಿಸ್ಟ್ ಬ್ಯಾಂಡ್ (ಮಣಿಕಟ್ಟಿನ ಪಟ್ಟಿ ) ಕುರಿತಂತೆ ನಡೆದ ಘರ್ಷಣೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ತಮಿಳುನಾಡಿನ ತಿರನೆಲ್ವೇಲಿಯಲ್ಲಿ ಶನಿವಾರ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಸೆಲ್ವ ಸೂರ್ಯ (17) ಎಂದು ಗುರುತಿಸಲಾಗಿದೆ. ಈತ ತಿರುನೆಲ್ವೇಲಿಯ ಪಾಪ್ಪಕುಡಿ ಗ್ರಾಮದ ನಿವಾಸಿ. ರಾಜ್ಯದ ಅತಿ ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದವನು.

ಎಪ್ರಿಲ್ 25ರಂದು ಸೂರ್ಯ 11ನೇ ತರಗತಿಯ ಮೂವರು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿದ್ದ. ಇವರಲ್ಲಿ ಓರ್ವ ದಲಿತ ಹಾಗೂ ಇನ್ನಿಬ್ಬರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು. ಸೂರ್ಯ ಸ್ವತಃ ಜಾತಿಸೂಚಕ ರಿಸ್ಟ್ ಬ್ಯಾಂಡ್ ಅನ್ನು ಕಟ್ಟಿದ್ದರೂ ಇನ್ನೋರ್ವ ದಲಿತ ವಿದ್ಯಾರ್ಥಿಯಲ್ಲಿ ‘‘ನೀನು ಜಾತಿ ಸೂಚಕ ರಿಸ್ಟ್ ಬ್ಯಾಂಡ್ ಅನ್ನು ಏಕೆ ಧರಿಸುತ್ತಿದ್ದಿ ಎಂದು ಪ್ರಶ್ನಿಸಿದ್ದ ’’

ಅನಂತರ ಅವರ ನಡುವ ಘರ್ಷಣೆ ನಡೆಯಿತು. ಈ ಸಂದರ್ಭ 11ನೇ ತರಗತಿ ವಿದ್ಯಾರ್ಥಿಗಳು ಸೂರ್ಯನ ಮೇಲೆ ಕಲ್ಲಿನಿಂದ ದಾಳಿ ನಡೆಸಿದರು. ಇದರಿಂದ ಸೂರ್ಯನ ತಲೆಗೆ ಗಾಯವಾಗಿತ್ತು. ಕೂಡಲೇ ಆತನನ್ನು ಅಂಬಾಸಮುದ್ರಂನಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಂತರ ಅಲ್ಲಿಂದ ಶಿಫಾರಸು ಮಾಡಿದಂತೆ ತಿರುನೆಲ್ವೆಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆ ತರಲಾಗಿತ್ತು. ಮೆದುಳಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ತೆಗೆಯಲು ಎಪ್ರಿಲ್ 26ರಂದು ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ, ಅನಂತರ ಆತ ಮೃತಪಟ್ಟಿದ್ದ.

ಘಟನೆಗೆ ಸಂಬಂಧಿಸಿ 11ನೇ ತರಗತಿಯ ಮೂವರು ವಿದ್ಯಾರ್ಥಿಗಳನ್ನು ರಿಮಾಂಡ್ ಹೆಮ್ನಲ್ಲಿ ಇರಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News