ಭಟ್ಕಳ: ಸಂಭ್ರಮದ ಈದ್ ಆಚರಣೆ
Update: 2022-05-02 12:11 IST
ಭಟ್ಕಳ, ಮೇ 2: ಉತ್ತರ ಕನ್ನಡದ ಕುಮಟಾದಲ್ಲಿ ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಸೋಮವಾರ ಸಂಭ್ರಮ, ಸಡಗರದ ಈದುಲ್ ಫಿತ್ರ್ ಆಚರಿಸಲಾಗುತ್ತಿದೆ.
ಇಲ್ಲಿನ ಈದ್ಗಾ ಮೈದಾನದಲ್ಲಿ ಇಂದು ಬೆಳಗ್ಗೆ ಮೌಲಾನಾ ಮೊಹಿನುದ್ದೀನ್ ಖ್ವಾಜಾ ಅಕ್ರಮಿ ಮದನಿ ನದ್ವಿ ನೇತೃತ್ವದ ಹಬ್ಬದ ವಿಶೇಷ ಸಾಮೂಹಿಕ ನಮಾಝ್ ನೆರವೇರಿತು.
ಮುಖ್ಯ ಖಾಝಿ ಮರ್ಕಝಿ ಖಲೀಫಾ ಜಮಾಅತುಲ್ ಮುಸ್ಲಿಮೀನ್ ಧರ್ಮೋಪದೇಶ ನೀಡಿದರು.