ಉತ್ತರಾಖಂಡದಲ್ಲಿ ವೇದ, ರಾಮಾಯಣ, ಗೀತೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ: ಶಿಕ್ಷಣ ಸಚಿವರ ಹೇಳಿಕೆ

Update: 2022-05-02 09:53 GMT
Photo:  Dhan Singh Rawat/Twitter

ಡೆಹ್ರಾಡೂನ್, ಮೇ 2: ಹಿಂದೂ ಧರ್ಮಗ್ರಂಥಗಳನ್ನು ಸೇರಿಸಲು ಉತ್ತರಾಖಂಡ ಶಿಕ್ಷಣ ಮಂಡಳಿಯ ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ರವಿವಾರ ಹೇಳಿದ್ದಾರೆ ಎಂದು ANI ವರದಿ ಮಾಡಿದೆ.

"ನಾವು ಸಾರ್ವಜನಿಕರಿಂದ ಸಲಹೆಗಳನ್ನು ಪಡೆದ ನಂತರ ಹಾಗೂ  ಶಿಕ್ಷಣತಜ್ಞರನ್ನು ಸಂಪರ್ಕಿಸಿದ ಬಳಿಕ ವೇದಗಳು, (ಭಗವದ್)ಗೀತೆ, ರಾಮಾಯಣ ಹಾಗೂ  ಉತ್ತರಾಖಂಡದ ಇತಿಹಾಸವನ್ನು ಪಠ್ಯಕ್ರಮದಲ್ಲಿ ಸೇರಿಸುತ್ತೇವೆ" ಎಂದು ಅವರು ಹೇಳಿದರು

ಮುಂಬರುವ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಜಾರಿಗೆ ತರಲಾಗುವುದು ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜುಲೈ 2020 ರಲ್ಲಿ ಕೇಂದ್ರ ಸರಕಾರವು ಅನುಮೋದಿಸಿತು ಹಾಗೂ  34 ವರ್ಷಗಳಲ್ಲಿ ಅಂತಹ ಮೊದಲ ಪರಿಷ್ಕರಣೆ ಮಾಡಲಾಗಿದೆ.

ಇದು ತಂತ್ರಜ್ಞಾನದ ಬಳಕೆ, ಸಂಸ್ಕೃತದ ಅಧ್ಯಯನ ಮತ್ತು ಐದನೇ ತರಗತಿಯವರೆಗೆ ಒಬ್ಬರ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಬೋಧನೆಯನ್ನು ಪ್ರೋತ್ಸಾಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News