"ಬಡವರ ಮೇಲೆ ವೀರಾವೇಶವೇಕೆ? ಬುಲ್ಡೋಝರ್‌ ಅನ್ನು ಅಂಬಾನಿ ಬಾಗಿಲಿಗೆ ಓಡಿಸುವ ಧೈರ್ಯವಿದೆಯೇ?"

Update: 2022-05-02 12:16 GMT
Photo: TNM

ಚೆನ್ನೈ: ಮೇ ತಿಂಗಳ ಬಿರು ಬಿಸಿಲಿನ ನಡುವೆಯೂ ಚೆನ್ನೈನ ವಳ್ಳುವರ್‌ ಕೊಟ್ಟಮ್‌ ಪಕ್ಕದ ಬೀದಿಯಲ್ಲಿ ಹಲವಾರು ಮಾನವ ಹಕ್ಕುಗಳ ಗುಂಪುಗಳು, ದೇಶದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಧ್ವೇಷದ ದಾಳಿಗಳ ವಿರುದ್ಧ ಹಾಗೂ, ಜಹಾಂಗಿರ್‌ ಪುರಿ ಹಿಂಸಾಚಾರ ಹಾಗೂ ನಂತರ ನಡೆದ ಬೆಳವಣಿಗೆಗಳ ವಿರುದ್ಧ ಪ್ರತಿಭಟನೆ ನಡೆಸಿದೆ.

ಅರಪ್ಪೋರ್ ಇಯಕ್ಕಂ, ಮಕ್ಕಳ್ ಪಾದೈ, ಡಿಸೆಂಬರ್ 3 ಮೂವ್‌ಮೆಂಟ್, ಅಖಿಲ ಭಾರತ ಕಿಸಾನ್ ಸಂಘರ್ಷ್ ಸಮನ್ವಯ ಸಮಿತಿ ಮೊದಲಾದ ಸಂಘಟನೆಗಳು ಈ ಪ್ರತಿಭಟನೆಯನ್ನು ಆಯೋಜಿಸಿದ್ದವು.

ಸಮಾಜದಲ್ಲಿನ ವಿಭಜನೆ ಮತ್ತು ದೇಶ ಅದಕ್ಕೆ ತೆರಬೇಕಾಗಿ ಬರಬಹುದಾದ ಬೆಲೆಯ ಕುರಿತು ಮಾತನಾಡಿದ ಅರಪ್ಪೋರ್ ಇಯಕ್ಕಂ ಸಂಘಟನೆಯ ಹರೀಶ್ ಸುಲ್ತಾನ್ ಶ್ರೀಲಂಕಾದ ಇತಿಹಾಸವನ್ನು ಉಲ್ಲೇಖಿಸಿದರು.

"ಮೊದಲು ಸಿಂಹಳೀಯ ರಾಷ್ಟ್ರೀಯತೆ ತಮಿಳರು ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಇತ್ತು. ಇಂದು (ಶ್ರೀಲಂಕಾ) ದೇಶ ಆರ್ಥಿಕ ಕುಸಿತದ ಹಂತ ತಲುಪಿದೆ. ಈಗ ರಾಜಪಕ್ಸೆ ವಿರುದ್ಧ ಸಿಂಹಳೀಯರೂ ಒಗ್ಗೂಡುತ್ತಿದ್ದಾರೆ. ಇದು ಭಾಷಾ ಮತ್ತು ಜನಾಂಗೀಯ ಕೋಮುವಾದದಿಂದ ಪ್ರಾರಂಭವಾಯಿತು, ”ಎಂದು ಅವರು ಹೇಳಿದರು.

"ಭಾರತದಲ್ಲಿ ,ನಾವು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುವ ಉದಾಹರಣೆಯಿಂದ ಪಾಠ ಕಲಿಯಲು ಸಾಧ್ಯವಾಗದಿದ್ದರೆ, ನಮ್ಮನ್ನು ಯಾರೂ ಉಳಿಸಲು ಸಾಧ್ಯವಿಲ್ಲ" ಎಂದು ಹರೀಶ್ ಹೇಳಿದರು. ಕರ್ನಾಟಕದ ಹಿಜಾಬ್‌ ವಿವಾದದ ಮೇಲಿನ ನಿಷೇಧಗಳನ್ನೂ 'ಮುಸ್ಲಿಂ ವಿರೋಧಿ ನೀತಿಗಳ ಸಾಲುʼ ಎಂದು ಅವರು ಕರೆದಿದ್ದಾರೆ.

 ಫ್ಯಾಸಿಸಂ ಸುಳ್ಳು ಹೇಳುತ್ತದೆ. ಜರ್ಮನ್ನರು ಸತ್ಯವೆಂದು ನಂಬುವವರೆಗೆ ಹಿಟ್ಲರ್‌ ಸುಳ್ಳನ್ನು ಪದೇ ಪದೇ ಹೇಳಿದ. ಅದೇ ರೀತಿ ಭಾರತದಲ್ಲಿ ಮೋದಿ ಸರ್ಕಾರ ನಿರಂತರವಾಗಿ ಜನರಿಗೆ ಸುಳ್ಳುಗಳನ್ನು ಪೋಷಿಸುತ್ತಿದೆ. ನಾವೆಲ್ಲರೂ ಅವರು ಮಾಡಿದ ಸುಳ್ಳು ಹೇಳಿಕೆಗಳನ್ನು ನಿರಾಕರಿಸಲು ನಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವೆ ಎಂದು ತೋರುತ್ತದೆ ಎಂದು ಅವರು ಹೇಳಿದರು.

 ಸ್ವತಂತ್ರ ಕಾರ್ಯಕರ್ತೆ ಶಾಕಿರ ಬಾನು ಮಾತನಾಡಿ, ತ್ರಿಪಲ್‌ ತಲಾಖ್‌ ನಿಷೇಧದ ಉದ್ದೇಷವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ವಿಚ್ಛೇದನ ನೀಡಿದ ಪತಿಯನ್ನು ಜೈಲಿಗೆ ಹಾಕುವುದರಿಂದ ಮಹಿಳೆಯರಿಗೆ ಸಿಗುವ ಲಾಭವೇನು? ಆದಾಯ ಇಲ್ಲದೆ ಅಥವಾ ಒಂದೇ ಆದಾಯ ಮೂಲದಿಂದ ಕುಟುಂಬದ ನರ್ವಹಣೆ ಮಾಡುವುದು ಹೇಗೆ? ಮುಸ್ಲಿಂ ಅಲ್ಲದ ಮಹಿಳೆಯರಿಗೆ ಯಾವ ಪರಿಹಾರ ಇದೆ? ತಲಾಕ್‌ ನೀಡದೆ ಹೆಂಡತಿಯನ್ನು ಗಂಡ ಬಿಟ್ಟು ಓಡಿ ಹೋದರೆ ಅಂತಹ ಹೆಂಡತಿಗೆ ಯಾವ ಪರಿಹಾರವಿದೆ? ಎಂದು ಪ್ರಶ್ನಿಸಿದ್ದಾರೆ.

ವಿಶೇಷವೆಂದರೆ, ಪ್ರತಿಭಟನೆ ಕೇವಲ ಭಾಷಣಗಳಿಗೆ ಹಾಗೂ ಘೋಷಣೆಗಳಿಗೆ ಸೀಮಿತವಾಗದೆ, ಸಾಂಸ್ಕೃತಿಕ ಪ್ರಕಾರಗಳಿಂದಲೂ ಪ್ರತಿರೋಧ ತೋರಲಾಯಿತು.  ಅಂಬೇಡ್ಕರ್ ವಾದಿ ಗಾನ ಸಂಗೀತ ತಂಡವಾದ ಕರ್ಪ್ಪಿ ಮಟ್ಟುಂ ಸಮತುವ ವಲ್ಲಿಗಲ್ (Karppi Mattrum Samthuva Valligal )ಅವರು ಡ್ರಮ್‌ಗಳು ಮತ್ತು ಇತರ ತಾಳವಾದ್ಯಗಳೊಂದಿಗೆ ನೃತ್ಯ ಪ್ರದರ್ಶನವನ್ನು ನೀಡಿದರು.

ಅದೇ ತಂಡದ ಗಾನ ಗಾಯಕ ಸ್ಟೀಫನ್ ಅವರು ಗೋಹತ್ಯೆ ನಿಷೇಧ, ಜಾತಿ ತಾರತಮ್ಯ, ಇಸ್ಲಾಮೋಫೋಬಿಯಾ, ಡಾ. ಅಂಬೇಡ್ಕರ್, ಕ್ರಿಶ್ಚಿಯನ್ ಮತಾಂತರದ ಭಯ- ಮತ್ತು ಹಿಂದಿ ಹೇರಿಕೆ ಕುರಿತು ಹಾಡಿದರು. ಅದೇ ಹಾಡಿನಲ್ಲಿ, ಬಲಪಂಥೀಯರು ಇಸ್ಲಾಂ ಧರ್ಮದ ಬಗ್ಗೆ ಸುಳ್ಳು ಐತಿಹಾಸಿಕ ನಿರೂಪಣೆಗಳನ್ನು ರಚಿಸುವುದರ ವಿರುದ್ಧ ಮತ್ತು ಜಹಾಂಗೀರ್ಪುರಿ ಉದಾಹರಣೆಯನ್ನು ಉಲ್ಲೇಖಿಸಿ ಬಡ ಸ್ಲಮ್‌ಗಳನ್ನು ಗುರಿಯಾಗಿಸುವ ವಿರುದ್ಧ ಎಚ್ಚರಿಕೆ ನೀಡಿದರು.

"ನೀವು ಬಡವರ ವಿರುದ್ಧ ನಿಮ್ಮ ವೀರಾವೇಶವನ್ನು ತೋರಿಸುತ್ತೀರಿ, ಬುಲ್ಡೋಜರ್ ಅನ್ನು ಅಂಬಾನಿ ಬಾಗಿಲಿಗೆ ಓಡಿಸುವ ಧೈರ್ಯವಿದೆಯೇ?" ಸ್ಟೀಫನ್ ತಮ್ಮ ಹಾಡಿನಲ್ಲಿ ಪ್ರಧಾನಿಯನ್ನು ಕೇಳಿದ್ದಾರೆ, ವಿವಿಧ ಧಾರ್ಮಿಕ ಹಿನ್ನೆಲೆಯ ಜನರು ಒಗ್ಗೂಡಿದರೆ ಅದು ತಮ್ಮ ಆಡಳಿತವನ್ನು ಉರುಳಿಸುತ್ತದೆ ಎಂದು ಕೇಂದ್ರ ಸರ್ಕಾರವು ಹೆದರುತ್ತಿದೆ ಎಂದು ಹಾಡಿದ್ದಾರೆ.

ಕರ್ನಾಟಕ ಸಂಗೀತಗಾರ ವಿಘ್ನೇಶ್ ಈಶ್ವರ್ ಅವರು ತಮಿಳು ಸೂಫಿ ಗೀತೆ "ಅಲ್ಲಾಹವೈ ನಾಮ್ ತೊಳುತಾಳ್" ಹಾಡನ್ನು ಹಾಡಿದರು.

  

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News