×
Ad

ರಶ್ಯದ ಆಕ್ರಮಣದ ಬಳಿಕ ಉಕ್ರೇನ್ ನಿಂದ 5.5 ಮಿಲಿಯನ್ ಜನರ ಪಲಾಯನ: ವಿಶ್ವಸಂಸ್ಥೆ

Update: 2022-05-02 23:11 IST
PHOTO COURTESY:TWITTER

ವಿಶ್ವಸಂಸ್ಥೆ, ಮೇ 2: ಉಕ್ರೇನ್ ವಿರುದ್ಧ ರಶ್ಯದ ಆಕ್ರಮಣ ಆರಂಭವಾದಂದಿನಿಂದ 5.5 ಮಿಲಿಯನ್‌ಗೂ ಅಧಿಕ ಮಂದಿ ಉಕ್ರೇನ್ ನಿಂದ ಪಲಾಯನ ಮಾಡಿರುವುದಾಗಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್ಎಚ್ಸಿಆರ್ ಸೋಮವಾರ ವರದಿ ಮಾಡಿದೆ. 

 ಇವರಲ್ಲಿ 3 ಮಿಲಿಯನ್ ಗೂ ಅಧಿಕ ಮಂದಿ ಪೋಲ್ಯಾಂಡ್ ಗೆ, 8,17,000 ಮಂದಿ ರೊಮಾನಿಯಾಕ್ಕೆ , ಸುಮಾರು 3,72,000 ಮಂದಿ ಸ್ಲೊವಾಕಿಯಾಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ. ಗಡಿ ದಾಟು ಕೇಂದ್ರದ ಅಧಿಕಾರಿಗಳು ಮತ್ತು ವಿವಿಧ ಮೂಲಗಳು ಒದಗಿಸಿದ ಅಂಕಿಅಂಶವನ್ನು ಆಧರಿಸಿ ಈ ಮಾಹಿತಿ ನೀಡಲಾಗಿದ್ದು ಎಪ್ರಿಲ್ 29ರವರೆಗಿನ ಅಂಕಿಅಂಶ ಇದಾಗಿದೆ ಎಂದು  ಯುಎನ್ಎಚ್ಸಿಆರ್ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News