×
Ad

ಪ್ರಥಮ ಬಾರಿ ಕ್ರೀಡಾಂಗಣದಲ್ಲಿ ಈದ್‌ ಪ್ರಾರ್ಥನೆ ಆಯೋಜಿಸಿದ ಬ್ಲ್ಯಾಕ್‌ಬರ್ನ್‌ ಫುಟ್ಬಾಲ್‌ ಕ್ಲಬ್

Update: 2022-05-04 12:49 IST
Photo: Twitter

ಲಂಡನ್:‌ ಮುಸ್ಲಿಮರ ಪವಿತ್ರ ಮಾಸ ರಮಝಾನ್‌ ಮುಕ್ತಾಯದ ಸಂದರ್ಭದಲ್ಲಿ ಆಚರಿಸಲಾಗುವ ಈದುಲ್‌ ಫಿತ್ರ್‌ ಹಬ್ಬದ ಪ್ರಯುಕ್ತ ಸಾಮೂಹಿ ಪ್ರಾರ್ಥನೆಯನ್ನು ಕ್ರೀಡಾಂಗಣದಲ್ಲಿ ಆಯೋಜಿಸಿದ ಪ್ರಥಮ ಫುಟ್ಬಾಲ್‌ ಕ್ಲಬ್‌ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್‌ ನ ಬ್ಲ್ಯಾಕ್‌ಬರ್ನ್‌ ಫುಟ್ಬಾಲ್‌ ಕ್ಲಬ್‌ ಪಾತ್ರವಾಗಿದೆ. ಎವೂದ್‌ ಪಾರ್ಕ್‌ ನಲ್ಲಿರುವ ಕ್ರೀಡಾಂಗಣದಲ್ಲಿ 3,000ಕ್ಕೂ ಹೆಚ್ಚು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. 

ಬೆಳಗ್ಗೆ 8:30ಗೆ ಪ್ರಾರ್ಥನೆಗೆಂದು ಕ್ರೀಡಾಂಗಣಕ್ಕೆ ಜನರು ಆಗಮಿಸಿದ್ದರು. ಕ್ರೀಡಾಂಗಣದಲ್ಲಿ ಜನರು ನೆರೆದು ಪ್ರಾರ್ಥಿಸುತ್ತಿರುವ ವೀಡಿಯೋದೊಂದಿಗೆ " ಬ್ಲ್ಯಾಕ್‌ ಬರ್ನ್‌ ರೋವರ್ಸ್‌ ನಿಂದ ಎಲ್ಲರಿಗೂ ಈದ್‌ ಮುಬಾರಕ್. ಇಂದು ಬೆಳಗ್ಗೆ, ಕ್ರೀಡಾಂಗಣದಲ್ಲಿ ಈದ್‌ ಪ್ರಾರ್ಥನೆ ಆಯೋಜಿಸಿದ ದೇಶದ ಮೊದಲ ಫುಟ್ಬಾಲ್‌ ಕ್ಲಬ್‌ ಎಂಬ ಹೆಗ್ಗಳಿಗೆ ರೋವರ್ಸ್‌ ಪಾತ್ರವಾಗಿದೆ "‌ ಎಂದು ಕ್ಲಬ್‌ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News