×
Ad

ಉಕ್ರೇನ್ ಸೇನೆಗೆ ಜತೆಯಾಗಿ ಇಸ್ರೇಲ್‌ನ ಬಾಡಿಗೆ ಸೈನಿಕರು: ರಶ್ಯ ಹೇಳಿಕೆ

Update: 2022-05-04 23:00 IST
PTI

ಮಾಸ್ಕೊ, ಮೇ 4: ಉಕ್ರೇನ್ ಸೇನೆಗೆ ಜತೆಯಾಗಿ ಇಸ್ರೇಲ್ ನ ಬಾಡಿಗೆ ಸಿಪಾಯಿಗಳು ರಶ್ಯ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ರಶ್ಯ ವಿದೇಶ ವ್ಯವಹಾರ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ಬುಧವಾರ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಕಟ್ಟಾ ಬಲಪಂಥೀಯ ಅಝೋವ್ ತುಕಡಿಯ ಜತೆ ಇಸ್ರೇಲ್ ನ  ಬಾಡಿಗೆ ಸಿಪಾಯಿಗಳೂ ರಶ್ಯ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸ್ಪುಟ್ನಿಕ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. 2014ರಲ್ಲಿ ಪೂರ್ವ ಉಕ್ರೇನ್‌ನ ಡೊನ್ಬಾಸ್ ಪ್ರದೇಶದಲ್ಲಿ ರಶ್ಯ ಪರ ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಟ ನಡೆಸಿ ಮುನ್ನೆಲೆಗೆ ಬಂದಿದ್ದ ಅಝೋವ್ ತುಕಡಿ ಬಳಿಕ ಉಕ್ರೇನ್ ಸೇನೆಯ ಅಧೀನಕ್ಕೆ ಬಂದಿತ್ತು.
    
ಫ್ಯಾಸಿಸ್ಟರು ಮತ್ತು ನಾಝಿಗಳೆಂದು ರಶ್ಯ ಪರಿಗಣಿಸುತ್ತಿರುವ ಅಝೋವ್ ತುಕಡಿ ಜತೆ ಇಸ್ರೇಲ್ ಬಾಡಿಗೆ ಸಿಪಾಯಿಗಳು ಕೈಜೋಡಿಸಿದ್ದಾರೆ ಎಂಬ ರಶ್ಯದ ಹೇಳಿಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ, ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಶ್ಯ ವಿದೇಶ ಸಚಿವ ಸೆರ್ಗೆಯ್ ಲಾವ್ರೋವ್, ಹಿಟ್ಲರ್ ನಲ್ಲಿ ಯೆಹೂದಿಗಳ ರಕ್ತ ಇತ್ತು ಎಂದು ಹೇಳಿರುವುದು ಈ ಬೆಂಕಿಗೆ ತುಪ್ಪ ಸುರಿದಿದೆ. ‘ಇದು ಅಕ್ಷಮ್ಯ ಮತ್ತು ಅತಿರೇಕದ ಹೇಳಿಕೆಯಾಗಿದ್ದು ಭಯಾನಕ ಐತಿಹಾಸಿಕ ಪ್ರಮಾದ’  ಎಂದು ಇಸ್ರೇಲ್ ಖಾರವಾಗಿ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News