×
Ad

ಬಿಜೆಪಿ ಸೇರ್ಪಡೆ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ: ಪ್ರಮೋದ್ ಮಧ್ವರಾಜ್

Update: 2022-05-06 21:31 IST

ಉಡುಪಿ : ಬಿಜೆಪಿ ಸೇರ್ಪಡೆ ಸಂಬಂಧ ಮಾಧ್ಯಮದವರಿಗೆ ನೀಡು ವಂತಹ ಯಾವುದೇ ಮಾಹಿತಿ ನನ್ನ ಬಳಿ ಇಲ್ಲ. ಏನಾದರೂ ಮಾಹಿತಿ ನನ್ನ ಬಳಿ ಇದ್ದರೆ ನಾನೇ ನಿಮ್ಮನ್ನು ಸಂಪರ್ಕಿಸಿ ಆ ಮಾಹಿತಿ ನೀಡುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಮಲ್ಪೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪತ್ರಿಕಾಗೋಷ್ಠಿ ಕರೆಯದೆ, ಮಾಧ್ಯಮದವರ ಜೊತೆ ಮಾತನಾಡದೆ ತುಂಬಾ ವರ್ಷಗಳಾಗಿವೆ. ಅತೀ ಶೀಘ್ರದಲ್ಲೇ ಮಾತನಾಡುತ್ತೇನೆ. ನನ್ನ ಪರ ಹಾಗೂ ವಿರೋಧವಾಗಿ ಚರ್ಚೆ ಮಾಡುತ್ತಿರುವುದು ಇದು ಹೊಸದಲ್ಲ. ಹಳೆಯ ಪ್ರಕ್ರಿಯೆ ಈಗಲೂ ಮುಂದು ವರೆಯುತ್ತಿದೆ ಎಂದರು.

ನನ್ನ ಬಗ್ಗೆ ಚರ್ಚೆಗೆ ಯಾರು ಕಾರಣ ಎಂಬುದು ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ ನಾನು ಸಂತೋಷ ಪಡುತ್ತಿದ್ದೇನೆ. ಬದಲು ಅದಕ್ಕಾಗಿ ದುಃಖ ಪಡುವುದಾಗಲೀ ಇನ್ನೊಬ್ಬರನ್ನು ದೂರುವುದಾಗಲೀ ಮಾಡುವುದಿಲ್ಲ.  ನನ್ನ ಮುಂದಿನ ರಾಜಕೀಯ ದೇವರು ನಡೆಸಿದಂತೆ ಆಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News