ಉಕ್ರೇನ್ನಲ್ಲಿ ಪರಮಾಣು ಅಸ್ತ್ರ ಬಳಸುವುದಿಲ್ಲ: ರಶ್ಯ ‌

Update: 2022-05-06 19:01 GMT

ಮಾಸ್ಕೊ, ಮೇ 6: ಉಕ್ರೇನ್ನಲ್ಲಿ ರಶ್ಯ ಪರಮಾಣು ಅಸ್ತ್ರ ಬಳಸುವುದಿಲ್ಲ ಎಂದು ರಶ್ಯದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಅಲೆಕ್ಸಿ ಝೈತ್ಸೇವ್ ಶುಕ್ರವಾರ ಹೇಳಿದ್ದಾರೆ.

ರಶ್ಯವು ಉಕ್ರೇನ್ನಲ್ಲಿ ಪರಮಾಣು ಅಸ್ತ್ರ ಬಳಸುವ ಅಪಾಯವಿದೆ ಎಂದು ಪಾಶ್ಚಿಮಾತ್ಯ ದೇಶಗಳು ಪದೇ ಪದೇ ಹೇಳುತ್ತಿರುವ ಬಗ್ಗೆ ಉಲ್ಲೇಖಿಸಿದ ಅವರು, ಉಕ್ರೇನ್ನಲ್ಲಿ ನಾವು ನಡೆಸುತ್ತಿರುವುದು ಯುದ್ಧವಲ್ಲ, ವಿಶೇಷ ಕಾರ್ಯಾಚರಣೆ. ಇದಕ್ಕೆ ಅವರ ಹೇಳಿಕೆ ಅನ್ವಯಿಸುವುದಿಲ್ಲ ಎಂದರು.
 ಉಕ್ರೇನ್ನಲ್ಲಿ ಆಗಿರುವ ಹಿನ್ನಡೆಯಿಂದ ತೀವ್ರ ಹತಾಶೆಗೊಂಡಿರುವ ರಶ್ಯ, ಪರಮಾಣು ಅಸ್ತ್ರ ಬಳಸುವ ಸಾಧ್ಯತೆಯನ್ನು ಯಾರೂ ಲಘುವಾಗಿ ಪರಿಗಣಿಸುವಂತಿಲ್ಲ ಎಂದು ಅಮೆರಿಕದ ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಎಪ್ರಿಲ್ 14ರಂದು ಹೇಳಿದ್ದರು. ಈ ಮಧ್ಯೆ, ಪೂರ್ವ ಉಕ್ರೇನ್ನ ಕ್ರಮಟೊರ್ಸ್ಕ್ ನಗರದಲ್ಲಿನ ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಕ್ಷಿಪಣಿ ಬಳಸಿ ಧ್ವಂಸಮಾಡಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಶುಕ್ರವಾರ ಹೇಳಿದೆ. ಅಲ್ಲದೆ ಪೂರ್ವದ ಲುಹಾನ್ಸ್ಕ್ ಪ್ರಾಂತದಲ್ಲಿ ಉಕ್ರೇನ್ನ 2 ಯುದ್ಧವಿಮಾನವನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News