ಉಕ್ರೇನ್ನಲ್ಲಿ ರಶ್ಯದ ಯುದ್ಧಾಪರಾಧ ದಾಖಲು: ಆಮ್ನೆಸ್ಟಿ ಇಂಟರ್ನ್ಯಾಷನಲ್ ‌

Update: 2022-05-06 19:02 GMT

ಲಂಡನ್, ಮೇ 6: ಉಕ್ರೇನ್ ರಾಜಧಾನಿ ಕೀವ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ರಶ್ಯ ಸೈನಿಕರಿಂದ ನಾಗರಿಕರ ಉದ್ದೇಶಪೂರ್ವಕ ಹತ್ಯೆ ಸೇರಿದಂತೆ ಉಕ್ರೇನ್ನಲ್ಲಿ ಹಲವು ಯುದ್ಧಾಪರಾಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಶುಕ್ರವಾರ ಹೇಳಿದೆ. ಉಕ್ರೇನ್ನಲ್ಲಿ ರಶ್ಯನ್ ಸೈನಿಕರ ಅಜಾಗರೂಕತೆಯ ಗುಂಡಿನ ದಾಳಿ, ಚಿತ್ರಹಿಂಸೆ ಇತ್ಯಾದಿಗಳಿಂದ ಹಲವಾರು ನಾಗರಿಕರು ತೊಂದರೆಗೆ ಒಳಗಾಗಿದ್ದಾರೆ ಎಂದು ಮಾನವ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುವ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನ ವರದಿ ಹೇಳಿದೆ. ಕೀವ್ ಹೊರವಲಯದ ಬುಚಾ ನಗರವನ್ನು ವಶಪಡಿಸಿಕೊಂಡಿದ್ದ ರಶ್ಯನ್ ಸೇನೆ, ಅಲ್ಲಿಂದ ನಿರ್ಗಮಿಸಿದ ಬಳಿಕ 400ಕ್ಕೂ ನಾಗರಿಕರ ಮೃತದೇಹ ರಸ್ತೆಪಕ್ಕ ಪತ್ತೆಯಾಗಿದೆ ಎಂಬ ಉಕ್ರೇನ್ ಅಧಿಕಾರಿಗಳ ಹೇಳಿಕೆಯನ್ನೂ ಗಮನಿಸಲಾಗುವುದು ಎಂದು ವರದಿ ಹೇಳಿದೆ.

ಆದರೆ ಈ ವರದಿಯನ್ನು ರಶ್ಯ ನಿರಾಕರಿಸಿದೆ. ಈ ಮಧ್ಯೆ, ರಶ್ಯ ಸೇನೆ ಎಸಗಿದ 9000ಕ್ಕೂ ಅಧಿಕ ಯುದ್ಧಾಪರಾಧಗಳ ತನಿಖೆ ನಡೆಸುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ರಶ್ಯ ಯುದ್ಧಾಪರಾಧ ಎಸಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವೂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News