ವಾರ್ಷಿಕ 100 ಬಿಲಿಯನ್ ಡಾಲರ್ ಗೂ ಅಧಿಕ ಆದಾಯ ಗಳಿಸಿದ ಪ್ರಥಮ ಭಾರತೀಯ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

Update: 2022-05-07 11:59 GMT
ಮುಕೇಶ್ ಅಂಬಾನಿ

ಮುಂಬೈ: ವರ್ಷವೊಂದರಲ್ಲಿ 100 ಬಿಲಿಯನ್ ಡಾಲರ್‍ಗೂ ಅಧಿಕ ( ಸುಮಾರು ರೂ. 7.69 ಲಕ್ಷ ಕೋಟಿ) ಆದಾಯ ಗಳಿಸಿದ ಪ್ರಥಮ ಭಾರತೀಯ ಕಂಪೆನಿಯೆಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಪಾತ್ರವಾಗಿದೆ.

ಎಪ್ರಿಲ್ 2021 ಹಾಗೂ ಮಾರ್ಚ್ 2022ರ ನಡುವೆ ಕಂಪೆನಿಯು ಒಟ್ಟು ರೂ. 7.92 ಲಕ್ಷ ಕೋಟಿ ಆದಾಯದಲ್ಲಿ ರೂ. 60,705 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಶುಕ್ರವಾರ ರೆಗ್ಯುಲೇಟರಿ ಫೈಲಿಂಗ್‍ನಲ್ಲಿ ಕಂಪನಿ ತೀಲಿಸಿದೆ.

ಮಾರ್ಚ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ನಿವ್ವಳ ಆದಾಯ ಶೇ 22.5ರಷ್ಟು ಏರಿಕೆಯಾಗಿದೆ. ತೈಲ ಸಂಸ್ಕರಣೆ, ಟೆಲಿಕಾಂ ಕ್ಷೇತ್ರ ಮತ್ತು ಡಿಜಿಟಲ್ ಕ್ಷೇತ್ರ ಸಹಿತ ರಿಟೇಲ್ ಕ್ಷೇತ್ರದಲ್ಲಿನ ಪ್ರಗತಿಯಿಂದ ಆದಾಯ ಹೆಚ್ಚಳವಾಗಿದೆ ಎಂದು ಕಂಪೆನಿ ತಿಳಿಸಿದೆ.

ಈ ವರ್ಷದ ಜನವರಿಯಿಂದ ಮಾರ್ಚ್ ತನಕ ಕಂಪೆನಿಯು ರೂ. 16,203 ಕೋಟಿ ಆದಾಯ ಗಳಿಸಿದ್ದು ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ರೂ. 13,227 ಕೋಟಿ ಆದಾಯ ಗಳಿಸಿತ್ತು. ಆದರೆ ಇದಕ್ಕಿಂತ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದಾಗ ಕಂಪೆನಿಯ ನಿವ್ವಳ ಲಾಭ ಶೇ 12.6ರಷ್ಟು ಕಡಿಮೆಯಾಗಿದೆ.

ಕಂಪೆನಿಯು ತೆರಿಗೆ, ಬಡ್ಡಿ ಮತ್ತಿತರ ಪಾವತಿಗಳಿಗಿಂತ ಮುನ್ನದ ಗರಿಷ್ಠ ಗಳಿಕೆಯಾದ ರೂ. 33,968 ಕೋಟಿ ಆದಾಯ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News