ಕೋಮುದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಯುನಿವೆಫ್ ಕರ್ನಾಟಕ ಆಗ್ರಹ

Update: 2022-05-09 15:39 GMT

ಮಂಗಳೂರು : ಕರ್ನಾಟಕದಲ್ಲಿ ಇತ್ತೀಚೆಗೆ ಧರ್ಮ ದಂಗಲ್ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಕೋಮುಗಲಭೆ ಗಳನ್ನು ಮತ್ತು ಕೋಮುದ್ವೇಷವನ್ನು ಹರಡುವಂತಹ ಕೆಲಸವನ್ನು ಕೆಲವು ಸಂಘಟನೆಗಳು ಮಾಡುತ್ತಿದ್ದು ಸರಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುನಿವೆಫ್ ಕರ್ನಾಟಕ ಆಗ್ರಹಿಸಿದೆ.

ಜಟಕಾ ಕಟ್, ಹಲಾಲ್ ಕಟ್, ಮಾವು ನಿಷೇಧದ ಬಳಿಕ ಈಗ ಅಝಾನ್‌ಗೆ ಪ್ರತಿಯಾಗಿ ಹನುಮಾನ್ ಚಾಲೀಸ್ ಪಠಣ  ಮುಂತಾದ  ವಿಚಾರಗಳನ್ನು ಮುಂದಿಟ್ಟುಕೊಂಡು ತನ್ನ ರಾಜಕೀಯ ಬೇಳೆ ಬೇಯಿಸಲು ಪ್ರಯತ್ನಿಸುತ್ತಿ ರುವ ಮತ್ತು ಆ ಮೂಲಕ  ಅಶಾಂತಿಯನ್ನು ಹಬ್ಬಿಸುವ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಒತ್ತಾಯಿಸಿದ್ದಾರೆ.

ಹನುಮಾನ್ ಚಾಲೀಸ್ ಅಥವಾ ಇತರ ಭಜನೆ ಕಾರ್ಯಕ್ರಮಗಳನ್ನು ದೇವಸ್ಥಾನಗಳಲ್ಲಿ ನಡೆಸಿದರೆ ಅಥವಾ ಮಾಡಿದರೆ ಯಾವುದೇ ಧರ್ಮಾನುಯಾಯಿಗಳಿಗೆ ಸಮಸ್ಯೆ ಇಲ್ಲ. ಮುಸಲ್ಮಾನರಿಗೆ ಅದರಿಂದ ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ಮಸೀದಿಯ ಮುಂಭಾಗದಲ್ಲಿ  ಉದ್ದೇಶಪೂರ್ವಕವಾಗಿ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಲುಷಿತ ಗೊಳಿಸುವುದನ್ನು  ಯುನಿವೆಫ್ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಅಲ್ಲದೆ ಇಂತಹ ಕಾನೂನು ಬಾಹಿರ ಘೋಷಣೆ ಕೂಗುವ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News