ನನ್ನ ವಿರುದ್ಧ ಸಾವಿರ ಪ್ರಕರಣಗಳು ದಾಖಲಾದರೂ ಬಗ್ಗುವುದಿಲ್ಲ: ಕೇಜ್ರಿವಾಲ್ ಗೆ ಬಗ್ಗಾ ಸವಾಲು

Update: 2022-05-11 17:44 GMT

ಹೊಸದಿಲ್ಲಿ,ಮೇ 11: ಪಂಜಾಬಿನಲ್ಲಿಯ ಗುರು ಗ್ರಂಥ ಸಾಹಿಬ್ಗೆ ಅಪಚಾರ ಪ್ರಕರಣದ ಆರೋಪಿ,ಡ್ರಗ್ ಮಾಫಿಯಾ ಮತ್ತು ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವ ಭರವಸೆಗಳ ಕುರಿತು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ರನ್ನು ಪ್ರಶ್ನಿಸಿದ್ದಕ್ಕಾಗಿ ಪಂಜಾಬ್ ಪೊಲೀಸರು ತನ್ನನ್ನು ಭಯೋತ್ಪಾದಕನಂತೆ ಬಂಧಿಸಿದ್ದರು ಎಂದು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಬುಧವಾರ ಇಲ್ಲಿ ಹೇಳಿದರು.

ತನ್ನ ನಾಟಕೀಯ ಬಂಧನದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಗ್ಗಾ,ತನ್ನ ವಿರುದ್ಧ ಒಂದು ಅಥವಾ ಸಾವಿರ ಪ್ರಕರಣಗಳು ದಾಖಲಾಗಲಿ,ಕೇಜ್ರಿವಾಲ್ರ ಭರವಸೆಗಳ ಕುರಿತು ಅವರನ್ನು ಪ್ರಶ್ನಿಸುವುದನ್ನು ತಾನು ಮುಂದುವರಿಸುತ್ತೇನೆ ಎಂದರು. ‘ನನ್ನನ್ನು ಭಯೋತ್ಪಾದಕನಂತೆ ಬಂಧಿಸಲಾಗಿತ್ತು,ಕೇಜ್ರಿವಾಲ್ರನ್ನು ಪ್ರಶ್ನಿಸಿದ್ದು ನನ್ನ ತಪ್ಪೇ’ಎಂದು ಬಗ್ಗಾ ಪ್ರಶ್ನಿಸಿದರು.

ಜು.5ರವರೆಗೆ ಬಗ್ಗಾರನ್ನು ಬಂಧಿಸದಂತೆ ಹರ್ಯಾಣ ಮತ್ತು ಪಂಜಾಬ ಉಚ್ಚ ನ್ಯಾಯಾಲಯವು ಮಂಗಳವಾರ ಪಂಜಾಬ್ ಪೊಲೀಸರಿಗೆ ನಿರ್ದೇಶ ನೀಡಿದೆ. ಕೇಜ್ರಿವಾಲ್ ಬದಲಾವಣೆಗಳನ್ನು ತರಲು ರಾಜಕೀಯ ರಂಗವನ್ನು ಪ್ರವೇಶಿಸಿದ್ದರೂ ತನ್ನನ್ನೇ ತಾನು ಬದಲಿಸಿಕೊಂಡಿದ್ದು ಹೇಗೆ ಎಂದು ಅವರನ್ನು ಪ್ರಶ್ನಿಸಲು ಬಯಸುತ್ತೇನೆ. ಕೇಜ್ರಿವಾಲ್ರ ನಿಜವಾದ ಬಣ್ಣ ಈಗ ಜನತೆಯ ಮುಂದೆ ಬಯಲಾಗಿದೆ ಎಂದು ಬಗ್ಗಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News