ಉಕ್ರೇನ್ ಗೆ 40 ಬಿಲಿಯನ್ ಡಾಲರ್ ಹೆಚ್ಚುವರಿ ನೆರವಿಗೆ ಅಮೆರಿಕ ಸಂಸತ್ತು ಅನುಮೋದನೆ

Update: 2022-05-11 17:52 GMT

ವಾಷಿಂಗ್ಟನ್, ಮೇ 11: ರಶ್ಯದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಉಕ್ರೇನ್ಗೆ ಇನ್ನಷ್ಟು ನೆರವಿನ ಅಗತ್ಯವಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಘೋಷಿಸಿದ ಬಳಿಕ, ಅಮೆರಿಕದ ಸಂಸತ್ತು ಉಕ್ರೇನ್ಗೆ ಹೆಚ್ಚುವರಿ 40 ಬಿಲಿಯನ್ ಡಾಲರ್ ನೆರವು ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ. ಉಕ್ರೇನ್ಗೆ ನೆರವು ನೀಡುವ ಮಸೂದೆಗೆ ಸಂಸತ್ತು 368-57 ಮತಗಳಿಂದ ಅನುಮೋದನೆ ನೀಡಿದೆ . ಇದರಲ್ಲಿ ಮಿಲಿಟರಿ ಮತ್ತು ಆರ್ಥಿಕ ನೆರವು ಇತ್ಯಾದಿ ಸೇರಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News