ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2022-05-13 13:14 GMT

ಉಡುಪಿ : ಜಿಲ್ಲೆಯ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಖಾಲಿ ಇರುವ ಪ್ರೋಜೆಕ್ಟ್ ಕೋ- ಆರ್ಡಿನೇಟರ್ (ಸ್ನಾತಕೋತ್ತರ ಪದವಿ) ಹಾಗೂ ಸಲಹೆಗಾರರು/ ಸಮಾಜ ಸೇವಕರ (ಎಂಎಸ್‌ಡಬ್ಲ್ಯೂ) ತಲಾ ಒಂದು ಹುದ್ದೆಗಳಿಗೆ ಗೌರವಧನದ ಆಧಾರದಲ್ಲಿ ಕರ್ತವ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಬನ್ನಂಜೆ, ಉಡುಪಿ ಕಚೇರಿ ದೂರವಾಣಿ ಸಂಖ್ಯೆ:೦೮೨೦-೨೫೨೬೩೯೪ಅನ್ನು ಸಂಪರ್ಕಿ ಸುವಂತೆ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News