ಭಾರತದ ಆರ್ಥಿಕತೆಯ ಸ್ಥಿತಿ ಕಳವಳಕಾರಿ: ಕಾಂಗ್ರೆಸ್ ನಾಯಕ ಚಿದಂಬರಂ

Update: 2022-05-14 09:25 GMT
ಕಾಂಗ್ರೆಸ್ ನಾಯಕ ಚಿದಂಬರಂ (PTI)

ಉದಯಪುರ್: ಭಾರತದ ಆರ್ಥಿಕತೆಯ ಸ್ಥಿತಿ ಅತ್ಯಂತ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಜಾಗತಿಕ ಮತ್ತು ದೇಶೀಯ ಬೆಳವಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಆರ್ಥಿಕ ನೀತಿಗಳನ್ನು ಮರುಹೊಂದಿಸುವ ಅಗತ್ಯವಿದೆ ಎಂದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈಗಿನ ಸರಕಾರದ ಕಳೆದ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ನಿಧಾನಗತಿಯ ಪ್ರಗತಿಯೇ ಪ್ರಮುಖ ಅಂಶವಾಗಿದೆ ಹಾಗೂ ಸಾಂಕ್ರಾಮಿಕ ನಂತರದ ಚೇತರಿಕೆ ಅಷ್ಟೇನಿಲ್ಲ ಎಂದರು.

ಉದಯಪುರ್‍ನಲ್ಲಿ ನಡೆದ ಮೂರು ದಿನಗಳ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ  ಆರ್ಥಿಕತೆ ಕುರಿತ ಚರ್ಚೆಗೆ ರಚಿಸಲಾದ ಸಮಿತಿಯ ಮುಖ್ಯಸ್ಥರಾಗಿರುವ ಚಿದಂಬರಂ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಬಂಧ ಮರುಪರಿಶೀಲನೆಗೆ ಇದು ಸಕಾಲ ಎಂದರು.

ಮೋದಿ ಸರಕಾರ 2017ರಲ್ಲಿ ಆರಂಭಿಸಿದ ಆದರೆ ಸಮರ್ಪಕವಾಗಿ ಜಾರಿಗೊಳಿಸಲಾಗಿಲ್ಲದ  ಜಿಎಸ್‍ಟಿ ಕಾನೂನುಗಳ ಪರಿಣಾಮ ಎಲ್ಲರ ಮುಂದಿದೆ ಎಂದು ಅವರು ಹೇಳಿದರು.

ರಾಜ್ಯಗಳ ಆರ್ಥಿಕ ಸ್ಥಿತಿ ತೀರಾ ನಾಜೂಕಾಗಿದೆ ಹಾಗೂ ತುರ್ತ ಪರಿಹಾರೋಪಾಯದ ಅಗತ್ಯವಿದೆ, ಆರ್ಥಿಕ ಸ್ಥಿತಿಗತಿಯ ಬಗ್ಗೆ ತಿಳಿದಿದ್ದರೂ ಅದನ್ನು ಹೇಗೆ ನಿಭಾಯಿಸುವುದೆಂಬ ಕುರಿತು ಈ ಸರಕಾರಕ್ಕೆ ತಿಳಿದಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News